ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶೇಷ ಗಾಯನ ಮತ್ತು ಚಿಂತನ ಕಾರ್ಯಕ್ರಮದಲ್ಲಿ ಡಾ. ಚುಂಚಯ್ಯ, ಡಾ. ನರೇಂದ್ರಕುಮಾರ್, ಪ್ರೊ.ಲೋಲಾಕ್ಷಿ, ಶರತ್‌ಸತೀತ್, ಕಿರಣ್, ಪ್ರದೀಪ್ ರಾಜು, ಶೇಷಣ್ಣ ಇತರರು ಇದ್ದರು.
ಜನ-ಮನ ಕವಿ ಸಿದ್ದಲಿಂಗಯ್ಯ ಅವರ ಬರಹಗಳು ಆಶಯವನ್ನು ಅರ್ಥ ಮಾಡಿಕೊಳ್ಳಬೇಕು
ಮೈಸೂರು:ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಭೀಮ ಬಲ ಬಳಗ ಹಾಗೂ ಅರಿವು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯಿಂದ ನಗರದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರ ಜನ್ಮದಿನದ ಅಂಗವಾಗಿ ವಿಶೇಷ ಗಾಯನ ಮತ್ತು ಚಿಂತನ ಕಾರ್ಯಕ್ರಮ ಜರುಗಿತು.
ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹದ ಆಡಳಿತ ಅಧಿಕಾರಿಯಾದ ಡಾ. ಚುಂಚಯ್ಯ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ. ನರೇಂದ್ರಕುಮಾರ್, ಸಿದ್ದಲಿಂಗಯ್ಯ ಅವರ ಜೀವನ, ಸಾಧನೆ ಕುರಿತು ಮಾತನಾಡಿದರು.
ಭೀಮ ಬಲ ಬಳಗದ ಸಂಚಾಲಕ ಪರಮಾನಂದ ಮಾತನಾಡಿ, ಜನ-ಮನ ಕವಿ ಸಿದ್ದಲಿಂಗಯ್ಯ ಅವರ ಅಂದಿನ ಬರಹಗಳು ಆಶಯವನ್ನು ಇಂದಿನ ಪೀಳಿಗೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಸಮಾನತೆಯನ್ನು ತರುವ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವತ್ತ ಚಿಂತಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಲೋಲಾಕ್ಷಿ ಮಾತನಾಡಿ, ಇಂದಿನ ಸಮಾಜಕ್ಕೆ ಡಾ. ಸಿದ್ದಲಿಂಗಯ್ಯ ಅವರ ಚಿಂತನೆಗಳು ಬಹಳ ಪ್ರಸ್ತುತ ಎನ್ನುವ ಮೂಲಕ ಅವರ ಪದ್ಯಗಳ ಸಾರವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಭೀಮ ಬಲ ಬಳಗ ತಂಡದ ಮಾಜಿ ಸಿಂಡಿಕೇಟ್ ಸದಸ್ಯ ಶರತ್‌ಸತೀತ್, ಕಿರಣ್, ಪ್ರದೀಪ್‌ರಾಜು, ಶೇಷಣ್ಣ ಮತ್ತು ತಂಡದಿಂದ ಸಿದ್ದಲಿಂಗಯ್ಯ ಅವರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವೇದಾವತಿ, ಅಶ್ವಿನಿ, ಮಹೇಶ್ ಮದ್ದೂರು, ಡಾ. ಪ್ರತಾಪ್, ಆನಂದ್ ವರಹಳ್ಳಿ ಇತರರಿದ್ದರು.