ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಅಶೋಕ್, ಎಸ್‌ಡಿಎಂಸಿ ಅಧ್ಯಕ್ಷೆ ಶುಭಾ, ಉಪಾಧ್ಯಕ್ಷ ರಫೀಕ್, ಸದಸ್ಯರಾದ ಶಿವರಾಮ್, ಸಂತೋಷ್, ವೆಂಕಟೇಶ್, ಬಿಆರ್‌ಸಿ ಹೇಮಲತಾ, ಇಸಿಒಗಳಾದ ಜಯಪ್ರಕಾಶ್, ರುದ್ರಪ್ಪ, ಕೇಶವಮೂರ್ತಿ, ಸಿಆರ್‌ಪಿ ಪ್ರಶಾಂತ್, ಶಿಕ್ಷಕ ಕೇಶವ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿ ಸೇರಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸಂವಿದಾನವೃತ್ತದಿಂದ ಶಾಲೆಯವರೆಗೆ ವಿದ್ಯಾರ್ಥಿಗಳು ಶಾಲಾ ಆರಂಭೋತ್ಸವದ ಅಂಗವಾಗಿ ಮೆರವಣಿಗೆ ಸಾಗಿಬಂದು ನಾಗರಿಕರಿಗೆ ಅರಿವುಮೂಡಿಸಿದರು.ಪುಟಾಣಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಕೋರಲಾಯಿತು.