ಜೋಗನಹಳ್ಳಿ ಗ್ರಾಮದಲ್ಲಿ ರಥೋತ್ಸವ

ಬೆಟ್ಟದಪುರ ಸಮೀಪದ ಜೋಗನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮೂರುರಮ್ಮ ತಾಯಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತ್ತು.
ಬೆಟ್ಟದಪುರ ಸಮೀಪದ ಜೋಗನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮೂರುರಮ್ಮ ತಾಯಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತ್ತು.
Published on

ಬೆಟ್ಟದಪುರ: ಸಮೀಪದ ಗ್ರಾಮದೇವತೆ ಶ್ರೀ ಮೂರುರಮ್ಮ ತಾಯಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಹದಿಮೂರು ವರ್ಷಗಳ ಬಳಿಕ ಗ್ರಾಮದ ಎಲ್ಲ ಕೋಮಿನ ಜನರು ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಣೆ ಮಾಡಲು ಪೂರ್ವತಯಾರಿ ಮಾಡಿಕೊಂಡಿದರು. ಶುಕ್ರವಾರ ಬೆಳಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ, ಪೂಜೆ ನೆರವೇರಿಸಿ, ಬಳಿಕ ಸಲ್ಲಿದ ಶುಭಲಗ್ನದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೂರದ ಊರುಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಸ್ವಚ್ಛತೆ ಮಾಡಲಾಗಿತ್ತು. ಗ್ರಾಮದ ಬೀದಿ, ರಸ್ತೆಗಳು ಮತ್ತು ದೇಗುಲವು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೋಳಿಸುತಿತ್ತು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net