ಕೋಟ್ಯಂತರ ಜನರ ಬದುಕಿಗೆ ಬೆಳಕಾದ ರಾಜೇಂದ್ರ ಶ್ರೀಗಳು

ಹುಣಸೂರು ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಶನಿವಾರ ತಾಲುಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ರಾಜೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮೋದೂರು ಮಹೇಶಾರಾಧ್ಯ, ರೇಣುಕಾಪ್ರಸಾದ್, ನಟರಾಜು, ಸಿದ್ದವೀರಪ್ಪ ಇತರರಿದ್ದರು.
ಹುಣಸೂರು ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಶನಿವಾರ ತಾಲುಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ರಾಜೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮೋದೂರು ಮಹೇಶಾರಾಧ್ಯ, ರೇಣುಕಾಪ್ರಸಾದ್, ನಟರಾಜು, ಸಿದ್ದವೀರಪ್ಪ ಇತರರಿದ್ದರು.
Published on
ಹುಣಸೂರು: ಆಧುನಿಕ ಕರ್ನಾಟಕದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಚರಿತ್ರೆಯಲ್ಲಿ ಸುತ್ತೂರು ಮಹಾ ಸಂಸ್ಥಾನ ಮಠದ ಪರಂಪರೆಗೆ ಮಹತ್ವದ ಸ್ಥಾನವಿದ್ದು, ತ್ರಿವಿಧ ದಾಸೋಹದ ಮೂಲಕ ನಾಡಿನ ಜನರ ಮನಸ್ಸಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಸದಾ ಹಸಿರಾಗಿದ್ದಾರೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ಸುತ್ತೂರು ಮಹಾಸಂಸ್ಥಾನದ ಲಿಂಗೈಕ್ಯ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಶ್ರೀ ಜಯಂತ್ಯುತ್ಸವ ಅಂಗವಾಗಿ ಹುಣಸೂರು ತಾಲೂಕು ಶರಣಸಾಹಿತ್ಯ ಪರಿಷತ್ತು ಮತ್ತು ತಾಲೂಕು ವೀರಶೈವ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಶನಿವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುತ್ತೂರು ಮಠ ಪರಂಪರೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಬಸವ ಪೂರ್ವ ಯುಗದಲ್ಲೇ ಶ್ರೀ ಮಠವು ಭಕ್ತರಿಗೆ ಆಶ್ರಯತಾಣವಾಗಿತ್ತು. ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ದೇಶದ ಹಲವು ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಕೋಟ್ಯಂತರ ಜನರ ಬದುಕಿಗೆ ಬೆಳಕಾಗಿದ್ದರು. ಅಂದು ಅವರು ಹಚ್ಚಿದ ಜ್ಞಾನದ ಹಣತೆ ನಂದಾದೀಪವಾಗಿ ಬಡವರ, ಅಸಹಾಯಕರ ಮತ್ತು ನೊಂದವರ ಬಾಳಿಗೆ ಬೆಳಕು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ನೌಕರ ಸಂಘದ ಅಧ್ಯಕ್ಷ ಡಾ.ಹರೀಶ್, ಶಿಕ್ಷಕರಾದ ಎ.ತ್ರಿನೇಶ್, ಗಂಗಾಧರ್, ಪರಿಷತ್ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್, ನೌಕರ ಸಂಘದ ಸಿದ್ದವೀರಪ್ಪ, ವೀರಭದ್ರಪ್ಪ, ಜಯದೇವಸ್ವಾಮಿ, ನಟರಾಜು, ಜಯಕುಮಾರ್, ಗುಂಡಪ್ಪ, ಶಿವಪ್ಪ ಯಮಗುಂಬ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net