ಈ ಉಪಕ್ರಮದ ಕುರಿತು ಮಾತನಾಡಿರುವ ಕ್ವೆಸ್ಟ್ ಗ್ಲೋಬಲ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಜಿತ್ ಪ್ರಭು ಅವರು , “ಎಂಜಿನಿಯರಿಂಗ್ ಶ್ರೇಷ್ಠತೆಯು ಅರ್ಥಪೂರ್ಣ ಸಾಮಾಜಿಕ ಪರಿಣಾಮವಾಗಿ ಬದಲಾಗಬೇಕು ಎಂಬುದು ಕ್ವೆಸ್ಟ್ ಗ್ಲೋಬಲ್‌ನಲ್ಲಿರುವ ನಮ್ಮ ದೃಢ ನಂಬಿಕೆಯಾಗಿದೆ. ಸುಸ್ಥಿರತೆಗೆ ಸಂಬಂಧಿಸಿದ ನಮ್ಮ ಬದ್ಧತೆಯು ತಂತ್ರಜ್ಞಾನವನ್ನು ಮೀರಿ, ಜನರ ಜೀವನ ಮಟ್ಟ ಸುಧಾರಿಸುವ ಆಶಯ ಹೊಂದಿದೆ. ಉಥಿಷ್ಟ ಚಾರಿಟಬಲ್ ಟ್ರಸ್ಟ್ ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ, ನಾವು ದೀರ್ಘಾವಧಿಯಿಂದಲೂ ವಿದ್ಯುತ್ ಸೌಲಭ್ಯ ಪಡೆಯುವುದೇ ಒಂದು ಸವಾಲಾಗಿರುವ ದೊಡ್ಡಾನೆಯಂತಹ ಅರಣ್ಯದಲ್ಲಿ ವಾಸಿಸುವ ಸಮುದಾಯಗಳಿಗೆ ಶುದ್ಧ ಸೌರಶಕ್ತಿ ಮತ್ತು ಸುರಕ್ಷಿತ ಬೆಳಕಿನ ಸೌಲಭ್ಯವನ್ನು ಒದಗಿಸುತ್ತಿದ್ದೇವೆʼ ಎಂದು ಹೇಳಿದ್ದಾರೆ.