ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 1ನೇ ತ್ರೈಮಾಸಿಕ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಕರ್ತವ್ಯಕ್ಕೆ ಅನುಕೂಲವಾಗುವಂತಹ ಉಡುಪುಗಳು, ಗ್ಲೌಸ್‌ಗಳು, ಶೂಗಳು, ಆರೋಗ್ಯತಪಾಸಣೆ ಮುಂತಾದ ಎಲ್ಲ ಸೌಲಭ್ಯಗಳು ಅವರಿಗೆ ನೀಡಿರಬೇಕು. ಈ ಕುರಿತು ಮುಂದಿನ ಸಭೆಯಲ್ಲಿ ಎಲ್ಲ ತಾಲೂಕು ಅಧಿಕಾರಿಗಳು ಚೆಕ್‌ಲಿಸ್ಟ್ ತಮಗೆ ನೀಡಬೇಕು. ಸಫಾಯಿಕರ್ಮಚಾರಿಗಳಿಗೆ ಬೆಳಗಿನ ತಿಂಡಿ ಶುಚಿಯಾಗಿ ಇರುವಂತೆ ನೋಡಿಕೊಳ್ಳಬೇಕು. ವರ್ಷಕ್ಕೊಮ್ಮೆ ಆಯೋಜಿಸುವ ಮಾಸ್ಟರ್ ಚೆಕ್‌ಅಪ್ ಕಡ್ಡಾಯವಾಗಿ ನಡೆಯಬೇಕು. ತಾಲೂಕಿನಲ್ಲಿರುವ ಕಾಯಂ ನೌಕರರ ಕುರಿತು ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.