ಕೆಪಿಆರ್‌ಎಸ್ ವತಿಯಿಂದ ಪ್ರತಿಭಟನೆ

ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಕೆಪಿಆರ್‌ಎಸ್ ಕಾರ್ಯಕರ್ತರು ತಂಬಾಕಿಗೆ ಬೆಂಬಲಬೆಲೆ ಘೋಷಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕೆ.ಬಸವರಾಜು, ಜಗದೀಶ್ ಸೂರ್ಯ, ಬಸವರಾಜು ಕಲ್ಕುಣಿಕೆ, ಚಿಕ್ಕಣ್ಣಗೌಡ, ಚಂದ್ರಶೇಖರ್ ಇತರರಿದ್ದರು.
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಕೆಪಿಆರ್‌ಎಸ್ ಕಾರ್ಯಕರ್ತರು ತಂಬಾಕಿಗೆ ಬೆಂಬಲಬೆಲೆ ಘೋಷಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕೆ.ಬಸವರಾಜು, ಜಗದೀಶ್ ಸೂರ್ಯ, ಬಸವರಾಜು ಕಲ್ಕುಣಿಕೆ, ಚಿಕ್ಕಣ್ಣಗೌಡ, ಚಂದ್ರಶೇಖರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೂಡಲೇ ತಂಬಾಕಿಗೆ ಬೆಂಬಲಬೆಲೆ ಘೋಷಿಸಲು ಆಗ್ರಹ
ಹುಣಸೂರು: ಕೇಂದ್ರ ಸರ್ಕಾರ ಈ ಕೂಡಲೇ ತಂಬಾಕಿಗೆ ಬೆಂಬಲಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಮತ್ತು ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಗುರುವಾರ ಜಮಾವಣೆಗೊಂಡ ಸಮಿತಿ ಸದಸ್ಯರು ಕೆಜಿಗೆ 410 ರೂ.ಗಳನ್ನು ಕೇಂದ್ರ ಸರ್ಕಾರ ಘೋಷಿಸಲಿ, ರೈತರನ್ನು ಉಳಿಸಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನಸೆಳೆದರು.
ಈ ವೇಳೆ ಮಾತನಾಡಿದ ಕೆಪಿಆರ್‌ಎಸ್ ನ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಾಲ ಸೋಲ ಮಾಡಿ ತಂಬಾಕು ಹದಗೋಳಿಸಿರುವ ರೈತ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ, ಆದರೆ ಇಂದು ಸೂಕ್ತ ಬೆಂಬಲ ಬೆಲೆ ಸಿಗದೇ ಕಂಗಲಾಗಿದ್ದಾನೆ. ಕುಸಿದಿರುವ ಪ್ರತಿ ಕೆ.ಜಿ ತಂಬಾಕಿಗೆ 410 ನಿಗದಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರದೇಶಸ ಬೇಕೆಂದು ಒತ್ತಾಯಿಸಿದರು.
ಬೆಲೆ ಕುಸಿತದ ಪರಿಣಾಮ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸಭೆ ನಿರ್ಣಯಗಳನ್ನು ಬಗೆಹರಿಸಲು ಗಮನಹರಿಸಬೇಕೆಂದರು.
ಕೆಪಿಆರ್‌ಎಸ್‌ನ ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜು ಮಾತನಾಡಿ, ಮಾರುಕಟ್ಟೆ ಆರಂಭದಲ್ಲಿ ಗುಣಮಟ್ಟದ ತಂಬಾಕಿಗೆ 320 ರೂ. ನೀಡಿದ್ದ ಕಂಪನಿಗಳು ಇದೀಗ ಕೆಜಿಗೆ ಕೇವಲ 240 ರಿಂದ 260 ರೂ. ನೀಡುತ್ತಿವೆ. ರೈತರು ಇದರಿಂದಾಗಿ ಕೆಜಿಗೆ 80-100ರೂ.ಗಳ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರಿಸಿದರು.
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಚಿಕ್ಕಣ್ಣಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಚ್.ಡಿ.ಬೀರೇಶ್ವರ್, ಮುಖಂಡ ಬಸವರಾಜು ವಿ. ಕಲ್ಕುಣಿಕೆ ಮಾತನಾಡಿದರು.
ಹೋರಾಟ ಸಮಿತಿಯ ಗೋವಿಂದಯ್ಯ. ಉದ್ದೂರ್ ನಟರಾಜು, ಹಳ್ಳದಕೊಪ್ಪಲು ಪುಟ್ಟರಾಜು, ಗೋವಿಂದೆಗೌಡ, ಗುಂಬನಳ್ಳಿ ಕರಿಯಪ್ಪ., ಟೈಲರ್ ಮೈಲಾರಿ. ಕಲ್ಕುಣಿಕೆ ಕರಿಯಣ್ಣ. ಬೀಜಗನಹಳ್ಳಿ ಸಿಂಧ್ಯಾ ಮುಂತಾದದವರಿದ್ದರು.
ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಮನವಿ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net