ಪರಿಸರ ಸ್ನೇಹಿ ಮೈಸೂರು ವಿಮಾನ ನಿಲ್ದಾಣಕ್ಕೆ ಆದ್ಯತೆ:ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಪಿ.ವಿ.ಉಷಾಕುಮಾರಿ
ನಗರದಲ್ಲಿ ಆಯೋಜಿಸಿರುವ ‘ಮೈ ಗ್ರೀನ್’ ವಸ್ತು ಪ್ರದರ್ಶನಕ್ಕೆ ಪಿ.ವಿ.ಉಷಾಕುಮಾರಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಕೆ.ಆರ್.ಪ್ರಭಾಕರ್ ರಾವ್, ಎಂ.ಡಿ.ಪ್ರವೀಣ್‌ಪಾಲ್, ಜಿ.ಅಶೋಕ್, ಎಸ್.ಶಶಿರಾಜ್, ಸಿ.ಡಿ.ಕೃಷ್ಣ, ಎಸ್.ವಾಸುದೇವನ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಿಲ್ದಾಣದಲ್ಲಿ ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಸೇವೆ ನೀಡಲು ಉದ್ದೇಶಿಸಲಾಗಿದೆ
ನಿಲ್ದಾಣವನ್ನು ಪರಿಸರ ಸ್ನೇಹಿ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದೆ
ಮೈಸೂರು:ಮೈಸೂರಿನ ವಿಮಾನ ನಿಲ್ದಾಣದಲ್ಲಿ ಪರಿಸರಕ್ಕೆ ಪೂರಕ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ ಎಂದು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಪಿ.ವಿ.ಉಷಾಕುಮಾರಿ ತಿಳಿಸಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಬಿಎಐ) ಮೈಸೂರು ಶಾಖೆ ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಮೈಗ್ರೀನ್’ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಲ್ದಾಣದಲ್ಲಿ ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಸೇವೆ ನೀಡಲು ಉದ್ದೇಶಿಸಲಾಗಿದೆ. ಈ ಮೂಲಕ ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಅಲ್ಲದೇ ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಪ್ರದೇಶಗಳಲ್ಲಿ ಔಷಧ ಗಿಡ-ಮರಗಳನ್ನು ಬೆಳೆಸುವ ಮೂಲಕ ಇಡೀ ವಿಮಾನ ನಿಲ್ದಾಣದ ಆವರಣವನ್ನು ಹಸಿರೀಕರಣ ಮಾಡಲಾಗುವುದು ಎಂದರು.
ಹಲವು ವರ್ಷಗಳಿಂದ ಪ್ರಸ್ತಾಪದಲ್ಲಿದ್ದ ರನ್‌ವೇ ವಿಸ್ತರಣೆ ಯೋಜನೆ ಚುರುಕುಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸೇವೆಯೊಂದಿಗೆ ಪ್ರಾದೇಶಿಕವಾಗಿ ನೆರೆ ರಾಜ್ಯಗಳ ನಗರಗಳಿಗೆ ನಿರಂತರವಾಗಿ ವಿಮಾನಯಾನ ಸೇವೆ ಸಿಗಲಿದೆ. ಇದುವರೆಗೆ 320ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ ಎಂದರು.
ಬಿಎಐ ಮೆಸೂರು ಶಾಖೆ ಅಧ್ಯಕ್ಷ ಕೆ.ಆರ್.ಪ್ರಭಾಕರ್ ರಾವ್, ವಸ್ತು ಪ್ರದರ್ಶನ ಸಮಿತಿಯ ಅಧ್ಯಕ್ಷ ಎಂ.ಡಿ. ಪ್ರವೀಣ್ ಪಾಲ್, ಕಾರ್ಯದರ್ಶಿ ಜಿ.ಅಶೋಕ್, ಖಜಾಂಚಿ ಎಸ್.ಶಶಿರಾಜ್, ಪರಿಸರ ಮಾಸಾಚರಣೆ ಸಮಿತಿ ಅಧ್ಯಕ್ಷ ಸಿ.ಡಿ.ಕೃಷ್ಣ, ಕಾರ್ಯದರ್ಶಿ ಎಸ್.ವಾಸುದೇವನ್, ಸಲಹೆಗಾರ ಆರ್.ರಘುನಾಥ್ ಇದ್ದರು.
ಪರಿಸರ ಸ್ನೇಹಿಯಾಗಿ ಕಟ್ಟಡ ನಿರ್ಮಿಸಲು ಅಗತ್ಯವಿರುವ ವಸ್ತುಗಳ ಬಗ್ಗೆ ಪರಿಚಯ ಮಾಡಿಕೊಡುವ ಪ್ರಯತ್ನ ಈ ಪ್ರದರ್ಶನದಲ್ಲಿ 24 ಮಳಿಗೆಗಳು ವಸ್ತು ಪ್ರದರ್ಶನದಲ್ಲಿವೆ.