ಮೈಸೂರು ಮತ್ತು ನಂಜನಗೂಡು ಪ್ರದೇಶದ ಆಮದು, ರಫ್ತು ವ್ಯಾಪಾರ ವೃದ್ಧಿಸುವ ಉದ್ದೇಶದಿಂದ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (ಎನ್‌ಎಂಪಿಎ) ಮತ್ತು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಮಾತನಾಡಿದರು. ನೂತನ ಮಂಗಳೂರು ಬಂದರು ನಮ್ಮ ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಜಾಗತಿಕ ಮಾರುಕಟ್ಟೆಗೆ ಉದ್ಯಮಗಳನ್ನು ಸಂಪರ್ಕಿಸುವ ಪ್ರಬಲ ಶಕ್ತಿಯಾಗಿದೆ. ಮೈಸೂರು ನಗರವು ಐಟಿ, ಶಿಕ್ಷಣ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಪ್ರಮುಖ ಕೇಂದ್ರವಾಗಿದೆ. ಮೈಸೂರಿನ ನಂಜನಗೂಡು ಪ್ರದೇಶದಲ್ಲಿ ಫಾರ್ಮಾಸ್ಯೂಟಿಕಲ್ಸ್, ಆಹಾರ ಸಂಸ್ಕರಣೆ, ರಾಸಾಯನಿಕ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಆಗುತ್ತಿವೆ. ಈ ಪ್ರದೇಶವನ್ನು ಕೈಗಾರಿಕೆ ಬೆಳವಣಿಗೆಗಳ ಇಂಜಿನ್ ಎಂದು ಕರೆಯಬಹುದು ಎಂದರು.