ಗುರುವಾರ ರಾತ್ರಿ 10 ಗಂಟೆಯಲ್ಲಿ ಮೈಸೂರು-ಗದ್ದಿಗೆ ಮುಖ್ಯ ರಸ್ತೆಯ ಸ್ವಾಮಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಶಿಯರ್ ಅಜಯ್‌ಕುಮಾರ್, ನೌಕರ ದಿನೇಶ್‌ರಿಂದ ಲೆಕ್ಕ ಪಡೆಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ಐವರ ತಂಡ ಡೀಸೆಲ್ ಕೇಳುವ ನೆಪದಲ್ಲಿ ಮಾರಕಾಸ್ತ್ರ ಹಿಡಿದು ಒಮ್ಮೆಲೆ ಕೊಠಡಿ ಒಳಪ್ರವೇಶಿಸಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಆಗ ಜೋರಾಗಿ ಕಿರುಚಿಕೊಂಡಾಗ ಪಕ್ಕದ ಬಡಾವಣೆಯ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಹೆದರಿದ ದರೋಡೆಕೋರರು ದಿನೇಶ್ ಬಳಿಯಿದ್ದ 15 ಸಾವಿರ ರೂ. ದೋಚಿ ಕಾರಿನಲ್ಲಿ ಗದ್ದಿಗೆ ಕಡೆ ಪರಾರಿಯಾಗಿದ್ದಾರೆ.