ಪಿಂಚಣಿ ಏರಿಕೆಗೆ ಮೈಸೂರಿನಲ್ಲಿ ಪಿಂಚಣಿದಾರರಿಂದ ಪ್ರತಿಭಟನೆ

ಕೇಂದ್ರ ಬಜೆಟ್‌ನಲ್ಲಿ ಕನಿಷ್ಠ ಪಿಂಚಣಿ ಏರಿಕೆಗೆ ಆಗ್ರಹಿಸಿ ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿಯಿಂದ ಬುಧವಾರ ಮೈಸೂರು ಸಂಸದರ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಬಜೆಟ್‌ನಲ್ಲಿ ಕನಿಷ್ಠ ಪಿಂಚಣಿ ಏರಿಕೆಗೆ ಆಗ್ರಹಿಸಿ ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿಯಿಂದ ಬುಧವಾರ ಮೈಸೂರು ಸಂಸದರ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
Published on
ಮೈಸೂರು: ಕೇಂದ್ರ ಬಜೆಟ್‌ನಲ್ಲಿ ಕನಿಷ್ಠ ಪಿಂಚಣಿ ಏರಿಕೆಗೆ ಆಗ್ರಹಿಸಿ ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿಯಿಂದ ಬುಧವಾರ ಸಂಸದರ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
ರಾಜ್ಯಸಭೆಯಲ್ಲಿ 2013ರಲ್ಲಿ ಸಲ್ಲಿಸಲಾದ ಕೋಶಿಯಾರಿ ಸಮಿತಿಯ ಶಿಫಾರಸುಗಳು ಇದುವರೆಗೂ ಅಂಗೀಕಾರವಾಗಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 16ನೇ, 17ನೇ ಹಾಗೂ 18ನೇ ಲೋಕಸಭಾ ಅವಧಿಗಳಲ್ಲಿಯೂ ತಪ್ಪು ಮತ್ತು ಅಪೂರ್ಣ ಮಾಹಿತಿಯನ್ನು ಸಂಸತ್ತಿಗೆ ಒದಗಿಸಿದೆ. ಸಚಿವಾಲಯ ಇಪಿಎಸ್-95 ನಿಧಿಯಲ್ಲಿ ಕೊರತೆ ಇದೆ ಎಂಬಂತೆ ವರದಿ ಮುಂದಿಟ್ಟಿದ್ದರೂ, 1995ರಿಂದಲೂ ಸದಾ ಮಿತವ್ಯಯದಲ್ಲೇ ಇದೆ. ಇಪಿಎಫ್‌ಒ 2023-24ರ ವಾರ್ಷಿಕ ವರದಿಯಲ್ಲಿಯೂ ಕೊರತೆ ಅಂದಾಜು ಇದ್ದರೂ, ನಿಧಿಗೆ ಇದುವರೆಗೆ ನಗದು ಹರಿವಿನ ಸಮಸ್ಯೆ ಎದುರಾಗಿಲ್ಲ. ಆದರೆ, ಕೇಂದ್ರ ಸರ್ಕಾರ ಪಿಂಚಣಿ ನಿಧಿ ಕೊರತೆಯಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಪಿಂಚಣಿದಾರರು ಕಿಡಿ ಕಾರಿದರು.
1996ರಲ್ಲಿ ಕಾರ್ಮಿಕ ಸಚಿವಾಲಯ ಸೇವಾವಧಿಗೆ ಅನುಗುಣವಾಗಿ ನಿಗದಿಪಡಿಸಿರುವ ಪಿಂಚಣಿ ಪ್ರಮಾಣವನ್ನು 81 ಲಕ್ಷ ಇಪಿಎಸ್ ಪಿಂಚಣಿದಾರರಿಗೆ ಅನ್ವಯಿಸಲಾಗಿಲ್ಲ. ಬಹುತೇಕ ಪಿಂಚಣಿದಾರರು 30 ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಪೂರ್ಣಗೊಳಿಸಿದ್ದು, ನಿಧಿಗೆ ಲಕ್ಷಾಂತರ ರೂಪಾಯಿ ಕೊಡುಗೆ ನೀಡಿದರೂ, ಪ್ರಸ್ತುತ ಪಡೆಯುತ್ತಿರುವ ಪಿಂಚಣಿ ಅತ್ಯಂತ ಅಲ್ಪವಾಗಿದೆ. ಇಪಿಎಸ್-95 ಒಂದು ಸಾಮಾಜಿಕ ಕಲ್ಯಾಣ ಯೋಜನೆ ಆಗಿರುವುದರಿಂದ, ಕೇಂದ್ರ ಸರ್ಕಾರ ಹೆಚ್ಚಿನ ಕೊಡುಗೆ ನೀಡುವ ಮೂಲಕ ನಿಧಿಯ ಸ್ಥಿರತೆ ಮತ್ತು ವೃದ್ಧಾಪ್ಯ ಪಿಂಚಣಿದಾರರ ಜೀವನ ಭದ್ರತೆ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ಪಿಂಚಣಿಯನ್ನು 7,500ಕ್ಕೆ ಹೆಚ್ಚಿಸಿ, ಬೆಲೆ ಏರಿಕೆ ಪರಿಹಾರ ಸೇರಿಸಬೇಕು. 2013ರ ಕೋಶಿಯಾರಿ ಸಮಿತಿಯ ಶಿಫಾರಸುಗಳಿಂ ದಲೂ ನಿರೀಕ್ಷೆಯಲ್ಲಿರುವ 81 ಲಕ್ಷ ಪಿಂಚಣಿದಾರರಿಗೆ ನ್ಯಾಯ ಒದಗಿಸಬೇಕು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಪಿಂಚಣಿದಾರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಷಡಕ್ಷರಿ, ಸಂಚಾಲಕರಾದ ಸೈಯದ್ ಮೊಹಮ್ಮದ್, ಶ್ರೀಕಂಠಪ್ರಸಾದ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮಹದೇವು ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net