ವನ್ಯಜೀವಿ ಛಾಯಾಗ್ರಾಹಕರಿಗೆ ತಾಳ್ಮೆ ಮುಖ್ಯ: ಅರಣ್ಯಾಧಿಕಾರಿ ಕೆ.ಪರಮೇಶ ಹೇಳಿಕೆ

ಮೈಸೂರು ಫೋಟೋಗ್ರಾಫರ್ ಅಸೋಸಿಯೇಷನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಪರಮೇಶ ಅವರು ಛಾಯಾಚಿತ್ರ ಪುಸ್ತಕ ಹಾಗೂ ಸಂಘದ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು. ಎ.ಶಾಂತಪ್ಪ, ಎಸ್.ರಾಮಪ್ರಸಾದ್, ಎನ್.ಮುರಳಿಧರ್, ಎಂ.ಆರ್.ರೂಪೇಶ್, ರವೀಂದ್ರ ಲಾಲ್ ಇತರರು ಇದ್ದರು.
ಮೈಸೂರು ಫೋಟೋಗ್ರಾಫರ್ ಅಸೋಸಿಯೇಷನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಪರಮೇಶ ಅವರು ಛಾಯಾಚಿತ್ರ ಪುಸ್ತಕ ಹಾಗೂ ಸಂಘದ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು. ಎ.ಶಾಂತಪ್ಪ, ಎಸ್.ರಾಮಪ್ರಸಾದ್, ಎನ್.ಮುರಳಿಧರ್, ಎಂ.ಆರ್.ರೂಪೇಶ್, ರವೀಂದ್ರ ಲಾಲ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಛಾಯಾಗ್ರಹಣ ನೆನಪುಗಳನ್ನು ಸೆರೆ ಹಿಡಿಯುವ ಒಂದು ಕಲೆ
  • ಕೆಲವು ಬಾರಿ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆಯೂ ಇದೆ. ಇದೆಲ್ಲವನ್ನು ದಾಟಿ ಚಿತ್ರ ಸೆರೆ ಹಿಡಿಯಬೇಕು.
ಮೈಸೂರು: ವನ್ಯಜೀವಿ ಛಾಯಾಗ್ರಹಣ ಮಾಡುವಾಗ ಅತ್ಯಂತ ತಾಳ್ಮೆ ಬೇಕಿದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ ಹೇಳಿದರು.
ಮೈಸೂರು ಫೋಟೋಗ್ರಾಫರ್ ಅಸೋಸಿಯೇಷನ್ ಟ್ರಸ್ಟ್‌ನಿಂದ ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಚಿತ್ರ ಪುಸ್ತಕ ಹಾಗೂ ಸಂಘದ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಛಾಯಾಗ್ರಹಣ ನೆನಪುಗಳನ್ನು ಸೆರೆ ಹಿಡಿಯುವ ಒಂದು ಕಲೆ. ಆ ಕಲೆಗೆ ಶ್ರದ್ಧೆ, ತಾಳ್ಮೆ ಅತಿ ಮುಖ್ಯ. ವನ್ಯಜೀವಿ ಛಾಯಾಗ್ರಾಹಣ ಮಾಡುವಾಗ ಅತ್ಯಂತ ತಾಳ್ಮೆ, ಸಮಯ ಪ್ರಜ್ಞೆ, ಎಚ್ಚರಿಕೆ ಬೇಕಾಗುತ್ತದೆ. ಅದನ್ನು ರೂಢಿಸಿಕೊಂಡವರು ಯಶಸ್ವಿಯಾಗುತ್ತಾರೆ ಎಂದರು.
ಒಮ್ಮೊಮ್ಮೆ ಹುಲಿ, ಚಿರತೆ, ಆನೆ ಸೇರಿದಂತೆ ಇನ್ನಿತರ ಪ್ರಾಣಿಗಳ ಫೋಟೋಗಾಗಿ ಬೆಳಗ್ಗೆಯಿಂದ ಸಾಯಂಕಾಲ ತನಕವೂ ಕಾದು ಕುಳಿತಿದ್ದು ಇದೆ. ಇಂತಹ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಕೆಲವು ಬಾರಿ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆಯೂ ಇದೆ. ಇದೆಲ್ಲವನ್ನು ದಾಟಿ ಚಿತ್ರ ಸೆರೆ ಹಿಡಿಯಬೇಕು. ನಮ್ಮ ಛಾಯಾಗ್ರಾಹಕರು ಕಲೆಯನ್ನು ಚನ್ನಾಗಿ ರೂಢಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಛಾಯಾಗ್ರಹಣಕಾರದ ಎಸ್. ಆರ್. ಮಧುಸೂದನ್, ಜಿ.ಎಸ್.ರವಿಶಂಕರ್, ಕೆ.ಜಿ.ಸಿದ್ದಲಿಂಗಪ್ರಸಾದ್, ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎ. ಶಾಂತಪ್ಪ, ಮಾಜಿ ಅಧ್ಯಕ್ಷ ಎಸ್.ರಾಮಪ್ರಸಾದ್, ಕಾರ್ಯದರ್ಶಿ ಎನ್.ಮುರಳಿಧರ್, ಸಹ ಕಾರ್ಯದರ್ಶಿ ಎಂ. ಆರ್.ರೂಪೇಶ್, ಖಜಾಂಚಿ ರವೀಂದ್ರ ಲಾಲ್, ನಿರ್ದೇಶಕರಾದ ಕೋ.ಸು.ನರಸಿಂಹಮೂರ್ತಿ, ಅರ್ಜುನ್, ಅರವಿಂದ್, ವಿವೇಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net