ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಭೇಟಿ

ಹುಣಸೂರು ತಾಲೂಕು ಮರದೂರು ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ.ನಾಗರಾಜ್, ಧರ್ಮೇಂದ್ರ, ಶ್ರೀಕಂಠು, ಸತೀಶ್, ಮೂರ್ತಿ, ಸಿದ್ದಲಿಂಗಪ್ಪ, ಪ್ರಸನ್ನ ಇತರರಿದ್ದರು.
ಹುಣಸೂರು ತಾಲೂಕು ಮರದೂರು ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ.ನಾಗರಾಜ್, ಧರ್ಮೇಂದ್ರ, ಶ್ರೀಕಂಠು, ಸತೀಶ್, ಮೂರ್ತಿ, ಸಿದ್ದಲಿಂಗಪ್ಪ, ಪ್ರಸನ್ನ ಇತರರಿದ್ದರು.
Published on
ಹುಣಸೂರು: ತಾಲೂಕಿನ ಮರದೂರು ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಮರದೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ದೇವಾಲಯ ಸಮಿತಿಯವರು ದೇಗುಲದ ಜೀರ್ಣೋದ್ಧಾರಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ಧರ್ಮೇಂದ್ರ ಮಾತನಾಡಿ, 5 ಶತಮಾನಗಳ ಇತಿಹಾಸ ಹೊಂದಿರುವ ದೇವಾಲಯವನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಕುರಿತು ಪರಿಶೀಲನೆಗೆ ಆಡಳಿತಾಧಿಕಾರಿ ಡಾ.ನಾಗರಾಜ್ ಅವರೊಂದಿಗೆ ಭೇಟಿ ನೀಡಿದ್ದೇವೆ. ದೇವಾಲಯದ ಜಾಗ ಗುರುತಿಸಿ ದೇವಾಲಯಕ್ಕೆ ಮೀಸಲಿಡಲು ತೀರ್ಮಾನಿಸಿದ್ದು ಅಭಿವೃದ್ಧಿಗಾಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ದೇವಾಲಯ ಸೇವಾ ಸಮಿತಿ ಸದಸ್ಯ ಶ್ರೀಕಂಠು ಮಾತನಾಡಿ, ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದ್ದು ಎಂದು ತಿಳಿದು ಬಂದಿದ್ದು ಸಮರ್ಪಕ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದೆ. ದೇಗುಲ ಜೀರ್ಣೋದ್ಧಾರಗೊಂಡಲ್ಲಿ ಈಭಾಗದ ಆಸ್ತಿಕರಿಗೆ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ, ಮದುವೆ ಮುಂತಾದ ಶುಭಕಾರ್ಯಗಳಿಗೆ ಅನುಕೂಲವಾಗಲಿದೆ. ತಾಲೂಕು ಆಡಳಿತ ಇತ್ತ ಗಮನಹರಿಸಬೇಕು ಎಂದು ಕೋರಿದರು.
ಸಮಿತಿ ಸದಸ್ಯರಾದ ಸತೀಶ್, ಮೂರ್ತಿ, ಲೋಕೇಶ್, ಗ್ರಾಮಸ್ಥರಾದ ಸಿದ್ದಲಿಂಗಪ್ಪ, ಪ್ರಸನ್ನ ಇತರರು ಹಾಜರಿದ್ದರು. ಇತ್ತೀಚೆಗೆ ದಕ್ಷಿಣ ಕನ್ನಡದ ಉಜಿರೆ, ಬಾರಕೂರು ಮತ್ತು ಮೂಡುಬಿದರೆ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಸೇವಾ ಕಾರ್ಯಗಳನ್ನು ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net