ನಂಜಾಪುರ ಮನುಕುಮಾರ್ ಅಧ್ಯಕ್ಷ

ಹುಣಸೂರು ತಾಲೂಕು ಪ್ರಗತಿಪರ ಗಾಣಿಗರ ವೇದಿಕೆ ಅಧ್ಯಕ್ಷರಾಗಿ ನಂಜಾಪುರ ಮನುಕುಮಾರ್ ವೇದಿಕೆ ವತಿಯಿಂದ ಆಯೋಜನೆಗೊಂಡಿರುವ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷ ರಮೇಶ್, ಶಿವಸ್ವಾಮಿ, ಪ್ರಧಾನಕಾರ್ಯದರ್ಶಿ ಪ್ರಸಾದ್ ಇತರರಿದ್ದಾರೆ.
ಹುಣಸೂರು ತಾಲೂಕು ಪ್ರಗತಿಪರ ಗಾಣಿಗರ ವೇದಿಕೆ ಅಧ್ಯಕ್ಷರಾಗಿ ನಂಜಾಪುರ ಮನುಕುಮಾರ್ ವೇದಿಕೆ ವತಿಯಿಂದ ಆಯೋಜನೆಗೊಂಡಿರುವ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷ ರಮೇಶ್, ಶಿವಸ್ವಾಮಿ, ಪ್ರಧಾನಕಾರ್ಯದರ್ಶಿ ಪ್ರಸಾದ್ ಇತರರಿದ್ದಾರೆ.
Published on
ಹುಣಸೂರು: ತಾಲೂಕು ಪ್ರಗತಿಪರ ಗಾಣಿಗರ ವೇದಿಕೆ ಅಧ್ಯಕ್ಷರಾಗಿ ನಂಜಾಪುರ ಮನುಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಪ್ರಗತಿಪರ ಗಾಣಿಗರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಶಿವಜ್ಯೋತಿ ನಗರದ ಪ್ರಸಾದ್, ಗೌರವಾಧ್ಯಕ್ಷರಾಗಿ ರಮೇಶ್ ಆಯ್ಕೆಯಾದರು. ವೇದಿಕೆಯ ಸಲಹೆಗಾರರಾಗಿ ಪುಟ್ಟಶೆಟ್ಟಿ, ನಗರ ಉಪಾಧ್ಯಕ್ಷರಾಗಿ ಶಿವಸ್ವಾಮಿ, ಗ್ರಾಮಾಂತರ ಉಪಾಧ್ಯಕ್ಷರಾಗಿ ಗೋವಿಂದಶೆಟ್ಟಿ, ಖಜಾಂಚಿಯಾಗಿ ವಿ.ಮಹದೇವ್, ಸಂಘಟನಾ ಕಾರ್ಯದರ್ಶಿ ಶಿವಣ್ಣ, ಸಹಕಾರ್ಯದರ್ಶಿ ನಾಗೇಂದ್ರ, ಲೆಕ್ಕಪರಿಶೋಧಕರಾಗಿ ಡಿ.ಕೃಷ್ಣಕುಮಾರ್ ಆಯ್ಕೆಯಾದರು. ವೇದಿಕೆಯ ನಿರ್ದೇಶಕರಾಗಿ ರಮೇಶ್, ಪ್ರಕಾಶ್, ರವಿಚಂದ್ರ, ಶಿವರಾಜು, ನಂಜುಂಡ, ಧರ್ಮಾಪುರ ರಾಜು, ಸುರೇಶ್, ತರೀಕಲ್ ನಾಗರಾಜ್, ವಡೆಯರಹೊಸಹಳ್ಳಿ ಪ್ರಕಾಶ್, ಚೌಡಿಕಟ್ಟೆ ವೆಂಕಟೇಶ್, ಹನಗೋಡು ರವಿ, ಮಂಟಿಕೊಪ್ಪಲು ಕುಮಾರ್, ಪಾಲಚಂದ್ರು, ಸೋಮನಹಳ್ಳಿ ಹರೀಶ್, ಸರ್ವೇ.ನಂ.ಸಣ್ಣಸ್ವಾಮಿ ಆಯ್ಕೆಯಾಗಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಪ್ರಸಾದ್ ತಿಳಿಸಿದರು.
ಅನಂತುಗೆ ಸನ್ಮಾನ: ಈ ವೇಳೆ ಮಾತನಾಡಿದ ಅಧ್ಯಕ್ಷ ನಂಜಾಪುರ ಮನುಕುಮಾರ್, ಜೂ.12ರಂದು ನಗರದ ಆರ್ಯವೈಶ್ಯ ಕಲ್ಯಾಣಮಂಟಪದಲ್ಲಿ ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮ್ಯಸೂರಿನ ಮಾಜಿ ಮೇಯರ್ ಅನಂತು ಅವರಿಗೆ ವೇದಿಕೆ ವತಿಯಿಂದ ಸನ್ಮಾನ ಆಯೋಜಿಸಲಾಗಿದೆ. ಅದೇ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಗಾಣಿಗ ಸಮುದಾಯವು ತಾಲೂಕಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯನ್ನು ಹೊಂದಿದ್ದು, ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕವಾಗಿ, ಹಿಂದುಳಿದಿದ್ದೇವೆ. ಅಲ್ಲದೆ ನಿರುದ್ಯೋಗಿಗಳು ಸಾಕಷ್ಟು ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ವೇದಿಕೆ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ವೇದಿಕೆಯ ಗೌರವ ಅಧ್ಯಕ್ಷ ಕೆ.ರಮೇಶ್, ಉಪಾಧ್ಯಕ್ಷ ಶಿವಸ್ವಾಮಿ, ಗ್ರಾಮಾಂತರ ಉಪಾಧ್ಯಕ್ಷ ಗೋವಿಂದಶೆಟ್ಟಿ, ಖಜಾಂಚಿ ಧರ್ಮಾಪುರ ವಿ.ಮಹದೇವ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ಅನೇಕ ಮುಖಂಡರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net