1 ರಿಂದ 4ರವರೆಗಿನ ಹಂತಗಳಲ್ಲಿ ಬರುವ 10,500 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ವಿಜಿಬಲ್ ಕ್ಲೀನ್ಲಿನೆಸ್ (ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊಳಿಸುವುದು ಹಾಗೂ ಇತ್ಯಾದಿ)ಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000, ಘನತ್ಯಾಜ್ಯ ನಿರ್ವಹಣೆಗೆ 1,500, ಆ್ಯಕ್ಸಸಸ್ ಟು ಸ್ಯಾನಿಟೇಷನ್ (ಶೌಚಗೃಹಗಳ ಉತ್ತಮ ನಿರ್ವಹಣೆ)ಗೆ 1,000, ಮಲಿನ ನೀರಿನ ನಿರ್ವಹಣೆಗೆ 1,000, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣಕ್ಕೆ 500, ಅಡ್ವೋಕೆಸಿ ಆಫ್ ಸ್ವಚ್ಛತಾ (ಸ್ವಚ್ಛತಾ ಆ್ಯಪ್ ಬಳಕೆ, ಸ್ವಚ್ಛತೆ ಕುರಿತು ಜನಜಾಗೃತಿ ಹಾಗೂ ಇತ್ಯಾದಿ)ಗೆ 1,500, ಇಕೋ ಸಿಸ್ಟಮ್ ಸ್ಟ್ರೆಂಥನಿಂಗ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಪ್ಯಾರಾಮೀಟರ್ಸ್ (ಅನೈರ್ಮಲ್ಯ ಸೃಷ್ಟಿಸುವವರಿಗೆ ದಂಡ ವಿಧಿಸುವುದು, ಸ್ವಚ್ಛ ವಾರ್ಡ್ ರ‌್ಯಾಂಕಿಂಗ್)ಗೆ 1,000, ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕೆ 500, ಸಿಟಿಜನ್ ಫೀಡ್‌ಬ್ಯಾಕ್‌ಗೆ 1000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.