ದಾಖಲಿಸಿಕೊಳ್ಳಲಾಗಿದೆ. ಕಾಣೆಯಾಗಿರುವ ಧನಂಜಯ್ ದೇವರಾಜ ಪೊಲೀಸ್ ಠಾಣೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯದ ವೇಳೆ ದೇವರಾಜ ಠಾಣೆಯ ಸಿಬ್ಬಂದಿ ಉಮೇಶ್ ಅವರೊಂದಿಗೆ 112 ಗರುಡ ವಾಹನದಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿದ್ದರು. ನಂತರ ಇಬ್ಬರನ್ನು ಅಮಾನತುಗೊಳಿಸಿದ್ದರು. ಮೂರು ದಿನಗಳ ಹಿಂದೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸದಿಂದ ಹೊರಟ ಧನಂಜಯ್ ಮನೆಗೆ ಮರಳಿಲ್ಲ. ಧನಂಜಯ್ ಅವರ ಪತ್ನಿ ರಾಜೇಶ್ವರಿ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.