

ಪ್ರಮುಖ ಮುಖ್ಯಾಂಶಗಳು
"ನಗರವನ್ನು ಶುಚಿಯಾಗಿ ಇಡಲು ನಗರದ ನಾಗರಿಕರ ಸಹಕಾರ ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಆಗಬೇಕಾ ಗಿರುವ ಸುಧಾರಣೆಗಳ ಕುರಿತು ಜನರಿಂದ ಅಭಿಪ್ರಾಯ ಪಡೆದು ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರುವ ಉದ್ದೇಶದಿಂದ ಪ್ರತಿ ವಾರ್ಡ್‌ಗೆ ಒಬ್ಬರಂತೆ 65 ವಾರ್ಡ್‌ಗಳಿಗೆ ಸಮುದಾಯ ಸಂಘಟಕರನ್ನು ನೇಮಕ ಮಾಡಲಾಗುತ್ತಿದೆ. ಈ ಸಮುದಾಯ ಸಂಘಟಕರು ಪ್ರತಿ ವಾರ್ಡ್‌ನ ಮನೆ ಮನೆಗಳಿಗೆ ತೆರಳಿ ವಾರ್ಡ್‌ನ ಸ್ವಚ್ಛತೆಯ ಕುರಿತು ಜನರಿಂದ ಮಾಹಿತಿ ಸಂಗ್ರಹಿ ನಮಗೆ ವರದಿ ಮಾಡುತ್ತಾರೆ. ಈ ವರದಿಯ ಆಧಾರದ ಮೇಲೆ ಮೈಸೂರನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಲು ಶ್ರಮಿಸಲಾಗುವುದು.ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ, ಮೈಸೂರು ನಗರ ಪಾಲಿಕೆ