ಭುವನೇಶ್ವರಿಯ ನೆನೆ ಮನವೇ.., ಬಂದ ಬಂದ ಮೇಘರಾಜ ನಮ್ಮ ಊರ ಕೆರೆಗೆ.., ಕರೆದರೂ ಕೇಳದೆ ಸುಂದರನೇ..., ಚೆಲುವೆ ಒಂದು ಕೇಳ್ತೀನಿ.., ಜೀವಾ ಹೂವಾಗಿದೆ ಭಾವ ಜೇನಾಗಿದೆ.., ಶಿಲೆಗಳು ಸಂಗೀತ ಆಡಿವೆ, ಬೇಲೂರು ಗುಡಿಯಲಿ... ಸೇರಿದಂತೆ ಅನೇಕ ಅಮರ ಗೀತೆಗಳು ಕಾರ್ಯಕ್ರಮದಲ್ಲಿ ಮೊಳಗಿದವು. ಪ್ರತಿಯೊಂದು ಹಾಡೂ ನೆರೆದಿದ್ದವರನ್ನು ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ದಿತು.