ಮೂಗೂರು ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ

ತಿ.ನರಸಿಪುರ ತಾಲೂಕಿನ ಮೂಗೂರು ಗ್ರಾಮದ ಹೊರವಲಯದಲ್ಲಿ ಕಬಿನಿ ನಾಲಾ ವ್ಯಾಪ್ತಿಯ ನಾಲೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು. ಸಿ.ಎಸ್.ಪುಟ್ಟರಾಜು, ಎಂ.ಬಿ.ಸಾಗರ್, ದಿಲೀಪ್ ಕುಮಾರ್, ಸುರೇಂದ್ರ ಇತರರು ಇದ್ದರು.
ತಿ.ನರಸಿಪುರ ತಾಲೂಕಿನ ಮೂಗೂರು ಗ್ರಾಮದ ಹೊರವಲಯದಲ್ಲಿ ಕಬಿನಿ ನಾಲಾ ವ್ಯಾಪ್ತಿಯ ನಾಲೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು. ಸಿ.ಎಸ್.ಪುಟ್ಟರಾಜು, ಎಂ.ಬಿ.ಸಾಗರ್, ದಿಲೀಪ್ ಕುಮಾರ್, ಸುರೇಂದ್ರ ಇತರರು ಇದ್ದರು.
Published on
ತಿ.ನರಸೀಪುರ: ಪುರಾಣ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯ ವಿರುವ ಮೂಗೂರು ಗ್ರಾಮವನ್ನು ಪ್ರಮುಖ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ ಎಂದು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ತಾಲೂಕಿನ ಮೂಗೂರು ಗ್ರಾಮದ ಹೊರವಲಯದಲ್ಲಿ ಶನಿವಾರ 4 ಕೋಟಿ ರೂ. ವೆಚ್ಚದ 38ರ ಕಬಿನಿ ನಾಲಾ ವ್ಯಾಪ್ತಿಯ ನಾಲೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಧಾರ್ಮಿಕತೆ ಮತ್ತು ಅಮ್ಮನವರ ಮೇಲೆ ಅತೀವ ಭಕ್ತಿಯನ್ನು ಹೊಂದಿರುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕೂಡ ಮೂಗೂರು ಗ್ರಾಮವನ್ನು ಧಾರ್ಮಿಕ ಕ್ಷೇತ್ರವನ್ನಾಗಿಸುವ ಹಂಬಲ ಹೊಂದಿದ್ದಾರೆ ಎಂದರು.
ಈಗಾಗಲೇ ಸ್ಥಳೀಯರ ವಿಶ್ವಾಸ ಗಳಿಸಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರ ಫಲವಾಗಿ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಭಕ್ತರ ಅನುಕೂಲಕ್ಕಾಗಿ ಟ್ರಸ್ಟ್‌ನಿಂದ ಯಾತ್ರಿ ಭವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಜಾತ್ರೋತ್ಸವ ವೇಳೆ ಅಪಾರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೂಂದರೆಯಾಗದಂತೆ ವಿಸ್ತಾರವಾದ ರಸ್ತೆಯನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಸ್ಥಳದಲ್ಲಿಯೇ ಇದ್ದ ನೀರಾವರಿ ಎಇಇ ಸುರೇಂದ್ರಗೆ ತಾಕೀತು ಮಾಡಿದರು.
ಗ್ರಾಮದಲ್ಲಿ ದುಸ್ಥಿತಿಯಲ್ಲಿರುವ ಶ್ರೀ ನಾರಾಯಣಸ್ವಾಮಿ ದೇವಾಲಯವನ್ನು ಜಿರ್ಣೋದ್ಧಾರ ಮಾಡುವಂತೆ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಅಲ್ಲದೆ ಅರ್ಧಕ್ಕೆ ನಿಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಪೂರ್ಣಗೊಳಿಸಿ ಹಾಗೂ ಸುಮಾರು ವರ್ಷಗಳ ಹಿಂದೆ ಬಿದ್ದ ಮಳೆಯಿಂದಾಗಿ ಕೊಚ್ಚಿ ಹೋಗಿರುವ ರಸ್ತೆಯನ್ನು ಮರು ನಿರ್ಮಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚಲುವರಾಜು, ಪಾರುಪತ್ತೇದಾರ್ ಎಂ.ಬಿ.ಸಾಗರ್, ಅರ್ಚಕ ಸುಂದ್ರಪ್ಪ, ಮುಖಂಡರಾದ ಡೇರಿ ನಾಗೇಂದ್ರ, ಹೊಸಳ್ಳಿ ಮಹದೇವಸ್ವಾಮಿ, ನೀರಾವರಿ ಇಲಾಖೆ ಎಇಇ ಸುರೇಂದ್ರ, ಗುತ್ತಿಗೆದಾರ ಪ್ರಕಾಶ್, ಎ.ಬಿ.ಮಂಜುನಾಥ್, ದಿಲೀಪ್‌ಕುಮಾರ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net