ಜೈಲಿನಲ್ಲಿ ಮೊಬೈಲ್, ಪೆನ್ ಡ್ರೈವ್ ಪತ್ತೆ

ಅಪರಾಧ
ಅಪರಾಧ
Published on
ಮೈಸೂರು: ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ಮೊಬೈಲ್ ಫೋನ್, ಒಟಿಜಿ ಕನೆಕ್ಟರ್, ಪೆನ್‌ಡ್ರೈವ್ ಸೇರಿದಂತೆ ಇತರ ವಸ್ತುಗಳು ದೊರೆತಿವೆ.
ಡಿ.29ರ ಸಂಜೆ 7.20ರ ಸುಮಾರಿನಲ್ಲಿ ಕಾರಾಗೃಹದ ಆವರಣದಲ್ಲಿ ಎಸೆಯಲಾಗಿದ್ದ ಕಪ್ಪು ಬಣ್ಣದ ಟೇಪ್‌ನಿಂದ ಸುತ್ತಿದ್ದ ಅನುಮಾನಾಸ್ಪದ ವಸ್ತುವನ್ನು ವಶಕ್ಕೆ ಪಡೆದಿರುವ ಕಾರಾಗೃಹ ಸಿಬ್ಬಂದಿ, ಪರಿಶೀಲನೆ ನಡೆಸಿದಾಗ ಮೊಬೈಲ್ ಚಾರ್ಜರ್, ಬ್ಯಾಟರಿ, 9 ಬೀಡಿ ಕಟ್ಟು, ಸಿಗರೇಟ್ ಪ್ಯಾಕೇಟ್ ಹಾಗೂ 2 ಕಲ್ಲುಗಳು ಪತ್ತೆಯಾಗಿವೆ.
ಡಿ.30ರಂದು ರಾತ್ರಿ 7.30ರ ಸುಮಾರಿಗೆ 3 ಮೊಬೈಲ್ ಫೋನ್, ಒಟಿಜಿ ಕನೆಕ್ಟರ್, ಪೆನ್‌ಡ್ರೈವ್‌ನ ಪೊಟ್ಟಣ ದೊರೆತಿದೆ. ಮಂಡಿ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯ ಅಧೀಕ್ಷಕ ಎಂ.ಎಚ್.ಆಶೇಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net