ಪದಕ ಬೇಟೆಯಾಡಿದ ಕ್ರೀಡಾಪಟುಗಳಿಗೆ ಸನ್ಮಾನ

ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ  ಸನ್ಮಾನಿಸಲಾಯಿತು. ಸುಮನಾ ನರಸಿಂಹಮೂರ್ತಿ, ಬಿ.ಬಸವರಾಜು, ಎಂ.ಯೋಗೇಂದ್ರ, ಸೋಮಶೇಖರ್, ಎಂ.ಪಿ.ಚಂದ್ರಶೇಖರ್ ಇತರರಿದ್ದರು.
ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಸುಮನಾ ನರಸಿಂಹಮೂರ್ತಿ, ಬಿ.ಬಸವರಾಜು, ಎಂ.ಯೋಗೇಂದ್ರ, ಸೋಮಶೇಖರ್, ಎಂ.ಪಿ.ಚಂದ್ರಶೇಖರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ಯಿಂದ ಅಭಿನಂದನೆ
ಗೋವಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 3ನೇ ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕ ಪಡೆದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅಶೋಕಪುರಂ ರೈಲು ನಿಲ್ದಾಣದ ಬಳಿಯ ಆರ್‌ಎನ್‌ಎಂ ಎಂಟರ್‌ಪ್ರೈಸಸ್ ಕಾರ್ಯಾಲಯದಲ್ಲಿ ಬುಧವಾರ ಸನ್ಮಾನ ಕಾರ್ಯಕ್ರಮ ನೆರವೇರಿತು.
ಕರ್ನಾಟಕವನ್ನು ಪ್ರತಿನಿಧಿಸಿದ್ದ ಮೈಸೂರಿನ 8 ಮಹಿಳಾ ಮಾಸ್ಟರ್ಸ್ ಕ್ರೀಡಾಪಟುಗಳು 9 ಚಿನ್ನ, 5 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟಿ 19 ಪದಗಳನ್ನು ಪಡೆದಿದ್ದಾರೆ. ಪದಕ ಬೇಟೆಯಾಡಿದ ಕೆ.ಜಿ.ಶರ್ಮಿಳಾ ಅರಸ್, ಬಿ.ಪಿ.ಪಾರ್ವತಿ, ಜಯಲಕ್ಷ್ಮೀ, ಜಿ.ಪುನಿತಾ, ಭಾಗೀರತಿ, ವಿಜಯ ರಮೇಶ್, ಮಂಜಮ್ಮ, ಎಚ್.ಎಂ.ಭಾರತಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಥ್ಲೆಟಿಕ್ಸ್ ತಂಡ ವ್ಯವಸ್ಥಾಪಕರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂಘದ ಕಾರ್ಯದರ್ಶಿ ಬಿ.ಬಸವರಾಜು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷೆ ಸುಮನಾ ನರಸಿಂಹಮೂರ್ತಿ, ಉಪಾಧ್ಯಕ್ಷ ಎಂ.ಯೋಗೇಂದ್ರ, ಪದಾಧಿಕಾರಿಗಳಾದ ಸೋಮಶೇಖರ್, ರಾಣಿ ಬಿ.ರಾಜ್, ಎಂ.ಎಸ್.ಮಹೇಶ್, ಪಾರ್ವತಿ ಕಾಂತರಾಜು, ಎಂ.ಪಿ.ಚಂದ್ರಶೇಖರ್, ಎನ್.ವಿನಾಯಕ್, ಬಸವರಾಜು, ಬಲರಾಮೇಗೌಡ, ರವಿ, ಸುಜಾತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net