ಗಾಣಿಗ ಸಮುದಾಯ ಅರ್ಥಿಕ ಅಭಿವೃದ್ಧಿ ಹೊಂದಲಿ

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಗಾಣಿಗರ ಅಭಿವೃದ್ಧಿ ನಿಮಗದ ಪ್ರಥಮ ಅಧ್ಯಕ್ಷ ಅನಂತು ಅವರನ್ನು ಸನ್ಮಾನಿಸಲಾಯಿತು. ವಿಜಯಕುಮಾರ್, ಪಾರ್ಥಸಾರಥಿ, ಬಸವರಾಜು, ಯೋಗೀಶ್ ಇತರರಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಗಾಣಿಗರ ಅಭಿವೃದ್ಧಿ ನಿಮಗದ ಪ್ರಥಮ ಅಧ್ಯಕ್ಷ ಅನಂತು ಅವರನ್ನು ಸನ್ಮಾನಿಸಲಾಯಿತು. ವಿಜಯಕುಮಾರ್, ಪಾರ್ಥಸಾರಥಿ, ಬಸವರಾಜು, ಯೋಗೀಶ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಗಾಣಿಗ ನಿಗಮ ಅಧ್ಯಕ್ಷ ಆನಂತು ಸಲಹೆ
ಹುಣಸೂರು: ರಾಜ್ಯ ಗಾಣಿಗ ನಿಗಮಕ್ಕೆ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮೇಯರ್ ಆನಂತು ಅವರನ್ನು ಸಮುದಾಯದ ವತಿಯಿಂದ ಗೌರವಿಸಲಾಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅಧ್ಯಕ್ಷ ಆನಂತು ಮಾತನಾಡಿ, ಸಣ್ಣಸಮುದಾಯದಲ್ಲಿ ಹುಟ್ಟಿದ ನನ್ನನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯು ಈ ಹಿಂದೆ ಮೈಸೂರು ನಗರಪಾಲಿಕೆ ಮೇಯರ್ ಆಗಿ ಮಾಡಿದರು. ಇದೀಗ ಮತ್ತೆ ಗಾಣಿಗ ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅವರಿಗೆ ಸಣ್ಣ-ಪುಟ್ಟ ಸಮಾಜಗಳ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಗಾಣಿಗ ಸಮುದಾಯ ಶೈಕ್ಷಣಿಕವಾಗಿ, ಅರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ಜನಾಂಗದ ಎಲ್ಲರ ವಿಶ್ವಾಸ, ಸಹಕಾರ ಪಡೆದು ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೇಳಿದರು.
ನನ್ನನ್ನು ಗುರುತಿಸಿ ನಿಗಮಕ್ಕೆ ಅಧ್ಯಕ್ಷರನ್ನಾಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ನಿವೃತ್ತ ಡಿ.ಡಿ.ಪಿ.ಐ. ಬಸವರಾಜು ಮಾತನಾಡಿ, ಸೌಮ್ಯ ಸ್ವಭಾವದ ಆನಂತು ಅವರು ತಮ್ಮ ಜನಸೇವೆಯಿಂದಲೇ ಗುರುತಿಸಿಕೊಂಡವರು ಎಂದರು.
ರಾಜ್ಯ ಗಾಣಿಗರ ಸಂಘದ ನಿರ್ದೇಶಕ ಡಾ.ಯೋಗೀಶ್ ಮಾತನಾಡಿ, ನಿಗಮದಲ್ಲಿ ಕೌಶಲ ತರಬೇತಿ ಪಡೆದವರಿಗೆ ಆರ್ಥಿಕ ನೆರವು, ಉನ್ನತ ವ್ಯಾಸಂಗಕ್ಕೆ ಮಾರ್ಗದರ್ಶನ, ನೆರವು ಸಿಗಲಿದ್ದು, ಬಳಸಿಕೊಳ್ಳಿರೆಂದರು.
ರಾಜ್ಯ ಗಾಣಿಗರ ಸಂಘದ ಉಪಾಧ್ಯಕ್ಷ ಚನ್ನಕೇಶವಶೆಟ್ಟಿ, ನಿವೃತ್ತ ಪ್ರಾಂಶುಪಾಲ ಪುಟ್ಟಶೆಟ್ಟಿ, ಬಿಜೆಪಿ ಪ್ರಧಾನಕಾರ್ಯದರ್ಶಿ ಸತೀಶ್, ಗ್ರಾ.ಪಂ.ಅಧ್ಯಕ್ಷ ವಿ.ಮಹದೇವ್, ಸದಸ್ಯ ಮನುಕುಮಾರ್ ಮಾತನಾಡಿದರು.
ಮೈಸೂರು ಜಿಲ್ಲಾ ಗಾಣಿಗರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್, ಮೈಸೂರು ಗಾಣಿಗರ ವಸತಿ ನಿಲಯದ ಅಧ್ಯಕ್ಷ ಪಾರ್ಥಸಾರಥಿ, ಮಂಡ್ಯ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಶಿವಕುಮಾರ್, ನಂಜನಗೂಡು ತಾಲೂಕು ಅಧ್ಯಕ್ಷ ಮಾದಶೆಟ್ಟಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಾಬು, ರಾಜ್ಯ ಮಟ್ಟದ ಕ್ರೀಡಾಪಟು ಯೋಗೇಶ್, ಗ್ರಾ.ಪಂ.ಸದಸ್ಯರಾದ ಗೌರಿಪುರಗೋವಿಂದಶೆಟ್ಟಿ, ತರಿಕಲ್‌ನಾಗರಾಜ್, ಧರ್ಮಾಪುರ ಸುರೇಶ್, ಮುಖಂಡರಾದ ರಘು, ಪ್ರಸಾದ್, ಶಿವಸ್ವಾಮಿ, ವೆಂಕಟೇಶ್, ನಾಗರಾಜ್, ನಂದಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net