ನಂತರ ಮೂರು ಗೋಷ್ಠಿಗಳು ನಡೆದವು. ಸಾಲಿಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ್ ಬೀಜಗನಹಳ್ಳಿ ಅವರು: ವ್ಯಕ್ತಿತ್ವ ವಿಕಸನ’ ಕುರಿತು, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿ.ನಂದೀಶ್ ಕುಮಾರ್ ಅವರು ’ಸೈಬರ್ ಕ್ರೈಂ ಅಪರಾಧಗಳ ತಡೆಯುವಿಕೆ’ ಕುರಿತು, ಸರಸ್ವತಿಪುರಂ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶೇಷಾದ್ರಿ ಅವರು ’ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು ಮತ್ತು ತಡೆಯುವಿಕೆಯ ಕ್ರಮಗಳು’ ಕುರಿತು ಉಪನ್ಯಾಸವನ್ನು ನೀಡಿದರು.