1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರಚನೆಗೊಂಡವು. ಮೈಸೂರಿನ ಒಡೆಯರು ಸೇರಿದಂತೆ ಹತ್ತಾರು ರಾಜಮನೆತನಗಳು, ನಾಡಿನ ಸಾಂಸ್ಕೃತಿಕ ರಾಯಭಾರಿ ಜಗಜ್ಯೋತಿ ಬಸವಣ್ಣನವರಂತಹ ಶರಣರು, ಪುರಂದರದಾಸರು, ಕನಕದಾಸರು ದಾಸರಂತಹ ದಾಸಶ್ರೇಷ್ಠರು, ವಿಚಾರವಾದಿಗಳು ನಾಡಿನಲ್ಲಿ ಹುಟ್ಟಿ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತವನ್ನು ಶ್ರೀಮಂತಗೊಳಿಸಿರುವುದು ಹೆಮ್ಮೆಯ ಸಂಗತಿ. ಆದಿಕವಿ ಪಂಪ, ರನ್ನ, ಕುಮಾರವ್ಯಾಸ, ಅಮೋಘವರ್ಷ ನೃಪತುಂಗ, ಹರಿಹರ ರಾಘವಾಂಕ ಸೇರಿದಂತೆ ಬಿ.ಎಂ.ಶ್ರೀ, ಕುವೆಂಪು, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್‌ರಂತಹ ಅಸಂಖ್ಯಾತ ಕವಿಗಳು ಕನ್ನಡ ಭಾಷೆಯ ಶಕ್ತಿ, ಸೊಬಗು, ಶ್ರೀಮಂತಿಕೆಯನ್ನು ತಮ್ಮ ಕಾವ್ಯ -ಕೃತಿಗಳ ಮೂಲಕ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.