ಮಕ್ಕಳಿಗೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆ ಕಲಿಸೋಣ: * ಸಾಹಿತಿ ಡಾ. ಕೆ.ಮಾಲತಿ ಅಭಿಪ್ರಾಯ

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಡಾ.ಕೆ.ಮಾಲತಿ, ಎಂ. ಬಿ.ಮಂಜೇಗೌಡ, ರವಿಕುಮಾರ್, ಜೆ.ಶೋಭಾ, ಡಾ.ನಿ.ಗೂ.ರಮೇಶ್, ಶ್ಯಾಮೇಶ್ ಅತ್ತಿಗುಪ್ಪೆ, ಡಾ.ಮೀನಾ ಕುಮಾರಿ, ರಾಣಿ ಮಹೇಶ್, ವಿಜಯಲಕ್ಷ್ಮೀ ಇದ್ದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಡಾ.ಕೆ.ಮಾಲತಿ, ಎಂ. ಬಿ.ಮಂಜೇಗೌಡ, ರವಿಕುಮಾರ್, ಜೆ.ಶೋಭಾ, ಡಾ.ನಿ.ಗೂ.ರಮೇಶ್, ಶ್ಯಾಮೇಶ್ ಅತ್ತಿಗುಪ್ಪೆ, ಡಾ.ಮೀನಾ ಕುಮಾರಿ, ರಾಣಿ ಮಹೇಶ್, ವಿಜಯಲಕ್ಷ್ಮೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ಕಾರ್ಯಕ್ರಮ ಆಯೋಜನೆ
  • ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು: ಮಾತೃಭಾಷೆಯನ್ನು ಮಕ್ಕಳಿಗೆ ತುಂಬಿದಾಗ ಮಾತ್ರ ಸಮಾಜದ ಆಸ್ತಿಯಾಗಿ ರೂಪುಗೊಳ್ಳುತ್ತಾರೆ ಎಂದು ಸಾಹಿತಿ ಡಾ.ಕೆ.ಮಾಲತಿ ಅಭಿಪ್ರಾಯಪಟ್ಟರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ಜಯನಗರದ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸೋಣ. ಆದರೆ, ಮಾತೃ ಭಾಷೆಯನ್ನು ಹೆಚ್ಚಾಗಿ ಬಳಸೋಣ. ನಮ್ಮ ಸಂಸ್ಕೃತಿ, ಪ್ರೀತಿ ಮೊದಲಾದ ಭಾವನೆಗಳು ವ್ಯಕ್ತವಾಗುವುದು ಮಾತೃಭಾಷೆಯಿಂದಲೇ ಹೊರತು ಬೇರೆ ಯಾವುದೇ ಭಾಷೆಯಿಂದಲ್ಲ. ಮಕ್ಕಳಿಗೆ ಇಂತಹ ಚಟುವಟಿಕೆ, ಸ್ಪರ್ಧೆಗಳಿಂದ ನಮ್ಮ ಸಂಸ್ಕೃತಿ, ಭಾಷೆ ಬೆಳೆಸಲು ಸ್ಫೂರ್ತಿಯಾಗುತ್ತದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ಮಕ್ಕಳಿಗೆ ಈಗಿನಿಂದಲೇ ನಾಡು-ನುಡಿ, ಭಾಷೆ, ನೆಲ-ಜಲ ಕುರಿತು ಅಭಿಮಾನ ಮೂಡಿಸಲು ಇದು ಸಹಕಾರಿ ಆಗುತ್ತದೆ. ಏನಾದರೂ ಆಗು, ಮೊದಲು ನೀ ಮಾನವನಾಗು ಎಂಬಂತೆ ಮೊದಲು ನಾವು ಮನುಷ್ಯತ್ವ ಬೆಳೆಸಿಕೊಳ್ಳಬೇಕು. ನಾವು ಹುಟ್ಟಿದ ಮಣ್ಣಿಗೆ ಋಣಿಯಾಗಿರಬೇಕು. ಆ ಮಣ್ಣಿನ ಆಚಾರ, ವಿಚಾರಗಳನ್ನು ಪಾಲಿಸಬೇಕು, ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕ ಡಾ.ನಿ.ಗೂ.ರಮೇಶ್ ಮಾತನಾಡಿ, ಇಂಗ್ಲಿಷ್‌ಗೆ ಒಬ್ಬರೇ ವಿಲಿಯಂ ಷೇಕ್ಸ್‌ಪಿಯರ್. ಆದರೆ ಕನ್ನಡ ನಾಡಿನಲ್ಲಿ ಷೇಕ್ಸ್‌ಪಿಯರ್ ಅನ್ನು ಮೀರಿಸುವ ಅನೇಕ ಸಾಹಿತಿಗಳು ಇದ್ದಾರೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಕನ್ನಡ. ಅದು ನಮ್ಮ ನಿಮ್ಮೆಲ್ಲರ ಹೆಗ್ಗಳಿಕೆ ಎಂದು ಹರ್ಷ ವ್ಯಕ್ತಪಡಿಸಿದರು.
ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಮುಖ್ಯ ಸಂಚಾಲಕಿ ಜೆ.ಶೋಭಾ, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಸಾಹಿತಿ ಶ್ಯಾಮೇಶ್ ಅತ್ತಿಗುಪ್ಪೆ, ಆರೋಗ್ಯಾಧಿಕಾರಿ ಡಾ.ಮೀನಾ ಕುಮಾರಿ, ಬಳಗದ ರಾಣಿ ಮಹೇಶ್, ವಿಜಯಲಕ್ಷ್ಮೀ ಇದ್ದರು.
ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯಕಾರ್ಯಕ್ರಮ, ಪುನೀತ್ ರಾಜ್‌ಕುಮಾರ್ ಹಾಡುಗಳ ಗಾಯನ ಏಕಾಭಿನಯ ನಡೆದವು.
ಭಾವಗೀತೆ ಸಿನಿಯರ್ ವಿಭಾಗದಲ್ಲಿ ರಾಜ ಎಸ್.ವಿಜಯನಂದ( ಪ್ರಥಮ), ಆರ್.ಸಾನ್ವಿ(ದ್ವೀತಿಯ), ಪುಣ್ಯ(ತೃತೀಯ), ಎನ್.ರಕ್ಷಾ ನಂದಿ (ಸಮಾಧಾನಕರ). ಜೂನಿಯರ್ ವಿಭಾಗದಲ್ಲಿ ಎಸ್.ಅನುಷ್ಕಾ (ಪ್ರ), ಲಕ್ಷಣ(ದ್ವಿ), ಹಂಸಿನಿ ಎಂ.ವಸಿಷ್ಠ (ತೃ), ಪವನಶ್ರೀ(ಸ) ಬಹುಮಾನ ಪಡೆದುಕೊಂಡರು.
ವೇಷಭೂಷಣ ಸ್ಪರ್ಧೆಯಲ್ಲಿ 5 ವರ್ಷದೊಗಿನ ವಿಭಾಗದಲ್ಲಿ ಅಲಕ್ಯ ದೀಪಕ್(ಪ್ರ), ಅನ್ವಿಕ(ದ್ವಿ), ಪ್ರತಿಕ್ ನೇಸರ(ತೃ), 9 ವರ್ಷದೊಳಗಿನ ವಿಭಾಗದಲ್ಲಿ ನಮ್ರತ(ಪ್ರ), ಅನಘ್ಯ ದೀಪಕ್(ದ್ವಿ), ಮನಸ್ವಿ ಸಚ್ಚಿತ್(ತೃ), ಪಿ. ಕುಶ್ವಿತ್( ಸ) ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net