ಮುಂದಿನ ಪೀಳಿಗೆಗಾಗಿ ಗಿಡ ಬೆಳೆಸೋಣ:ಲಯನ್ಸ್ ಗಾರ್ಡನ್ ಸಿಟಿ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ ಗೌಡ ಸಲಹೆ

ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಮೈಸೂರು ಲಯನ್ಸ್ ಗಾರ್ಡನ್ ಸಿಟಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಇ.ಸಿ.ನಿಂಗರಾಜ ಗೌಡ ಗಿಡ ನೆಟ್ಟು ನೀರೆರೆದರು. ವಿ.ಪಿ.ಲಕ್ಷ್ಮೀನಾರಾಯಣ್, ಸಿ.ಡಿ. ಕೃಷ್ಣ, ಎನ್.ಶಂಕರ್, ನಿತೀನ್‌ಕುಮಾರ್ ಇದ್ದರು.
ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಮೈಸೂರು ಲಯನ್ಸ್ ಗಾರ್ಡನ್ ಸಿಟಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಇ.ಸಿ.ನಿಂಗರಾಜ ಗೌಡ ಗಿಡ ನೆಟ್ಟು ನೀರೆರೆದರು. ವಿ.ಪಿ.ಲಕ್ಷ್ಮೀನಾರಾಯಣ್, ಸಿ.ಡಿ. ಕೃಷ್ಣ, ಎನ್.ಶಂಕರ್, ನಿತೀನ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು
  • ಒಬ್ಬ ವ್ಯಕ್ತಿ ಒಂದು ಗಿಡ ಎಂಬ ಸಂಕಲ್ಪದೊಂದಿಗೆ ಹಸಿರು ಮೈಸೂರಿನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು

ಮೈಸೂರು:

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಹೆಬ್ಬಾಳು ಬಡಾವಣೆ ಬಳಿ ಇರುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಮೈಸೂರು ಲಯನ್ಸ್ ಗಾರ್ಡನ್ ಸಿಟಿ ಸಂಸ್ಥೆಯಿಂದ ಗಿಡ ನೆಡಲಾಯಿತು.

ಲಯನ್ಸ್ ಗಾರ್ಡನ್ ಸಿಟಿ ಸಂಸ್ಥೆಯ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜಗೌಡ ಗಿಡ ನೆಟ್ಟು ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂದು ಹೇಳಿದರು.
ಮರಗಳು ಮಾನವ ಕುಲ, ಪ್ರಾಣಿ, ಪಕ್ಷಿಗಳಿಗೆ ಶುದ್ಧ ಗಾಳಿ, ನೆರಳು ಹಾಗೂ ಪರಿಸರ ಸಮತೋಲನವನ್ನು ನೀಡುತ್ತವೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ನಿರ್ಮಾಣದಿಂದ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿದ್ದು, ಮುಂದಿನ ಪೀಳಿಗೆಯ ಹಿತಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ಮನೆ, ಶಾಲಾ-ಕಾಲೇಜು, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಪಾಲನೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಒಬ್ಬ ವ್ಯಕ್ತಿ ಒಂದು ಗಿಡ ಎಂಬ ಸಂಕಲ್ಪದೊಂದಿಗೆ ಹಸಿರು ಮೈಸೂರಿನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಸಂಸ್ಥೆಯ ಅಧ್ಯಕ್ಷ ವಿ.ಪಿ.ಲಕ್ಷ್ಮೀನಾರಾಯಣ್, ಆಡಳಿತಧಿಕಾರಿ ಸಿ.ಡಿ.ಕೃಷ್ಣ, ಉಪಾಧ್ಯಕ್ಷರಾದ ಎನ್. ಶಂಕರ್, ನಿತೀನ್‌ಕುಮರ್, ರಾಜು, ದಿನೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net