ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೇಣುಕಾಂಬ, ಮಹದೇವೇಗೌಡ, ರಘುರಾಂ ವಾಜಪೇಯಿ, ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಮನೋಹರ್, ಸಾಲುಂಡಿ ದೊರೆಸ್ವಾಮಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತನ್ನ ಸೇನೆಯ ದಂಡ ನಾಯಕನನ್ನಾಗಿ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದರು
ನಾಡಿನ ಉಳಿವಿಗಾಗಿ ರಾಯಣ್ಣ ತನ್ನ ಕೊನೆ ಉಸಿರು ಇರುವ ತನಕವೂ ಸೇನೆ ಕಟ್ಟಿಕೊಂಡು ಹೋರಾಡಿದರು
ಮೈಸೂರು:
ಮಾತೃಭೂಮಿ ಸಲುವಾಗಿ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ತತ್ವ-ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಎಸ್‌ಎಫ್‌ಟಿಇ ಯೂನಿಯನ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಎಂ.ಮಹದೇವೇಗೌಡ ಕರೆ ನೀಡಿದರು.
ಮೈಸೂರು ಕನ್ನಡ ವೇದಿಕೆಯಿಂದ ನಗರದ ನಮನ ಕಲಾ ಮಂಟಪದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಣ್ಣದಾಗಿ ಗುಂಪುಗಳನ್ನು ಕಟ್ಟಿಕೊಂಡು ನಾಯಕನಾಗಿದ್ದ ಸಂಗೊಳ್ಳಿ ರಾಯಣ್ಣನನ್ನು ಕಿತ್ತೂರು ರಾಣಿ ಚೆನ್ನಮ್ಮ ಗುರುತಿಸಿ ತನ್ನ ಸೇನೆಯ ದಂಡ ನಾಯಕನನ್ನಾಗಿ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದರು. ನಾಡಿನ ಉಳಿವಿಗಾಗಿ ರಾಯಣ್ಣ ತನ್ನ ಕೊನೆ ಉಸಿರು ಇರುವ ತನಕವೂ ಸೇನೆ ಕಟ್ಟಿಕೊಂಡು ಹೋರಾಡಿದರು. ಆದರೆ ತಮ್ಮವರಿಂದಲೇ ಮೋಸಕ್ಕೆ ಬಲಿಯಾಗಿ ಬ್ರಿಟಿಷರಿಗೆ ಸೆರೆ ಸಿಕ್ಕುವಂತಾಯಿತು ಎಂದರು.
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಪಿ.ಮಾಲೇಗೌಡ ಮಾತನಾಡಿ, ಸಂಗೊಳ್ಳಿ ರಾಯಣ್ಣ ಈ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನವನ್ನು ವೇದಿಕೆಗಳನ್ನು ಹಾಡಿ, ಹೊಗಳಿದರೆ ಸಾಲದು. ಬ್ರಿಟಿಷರ ವಿರುದ್ಧ ಆತ ಹೊತ್ತಿಸಿದ ಕಿಡಿ ಮುಂದಿನ ಪೀಳಿಗೆಗೂ ಮುಂದುವರಿಯಬೇಕೆಂದರೆ ಪಠ್ಯಗಳಲ್ಲಿ ರಾಯಣ್ಣನ ಜೀವನ ಚರಿತ್ರೆ ಇನ್ನಷ್ಟು ಪರಿಣಾಮಕಾರಿಯಾಗಿ ಬರುವಂತೆ ಮಾಡಬೇಕು. ಆಗ ಮುಂದಿನ ಪೀಳಿಗೆಗೂ ರಾಯಣ್ಣನ ದೇಶಭಕ್ತಿ ಎಂತಹದ್ದು ಎಂಬುದು ತಿಳಿಯಲಿದೆ ಎಂದರು.
ಮಡಿಕೇರಿಯ ಕೊಡಗು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷೆ ರೇಣುಕಾಂಬ ಕಾರ್ಯಕ್ರಮ ಉದ್ಘಾಟಿಸಿ ರಾಯಣ್ಣ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು.
ಸಮಾಜ ಸೇವಕರಾದ ರಘುರಾಂ ವಾಜಪೇಯಿ, ಕೆ.ಬಿ.ಲಿಂಗರಾಜು ಮಾತನಾಡಿದರು. ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕಿ ಪಿ.ರಾಜೇಶ್ವರಿ, ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಮನೋಹರ್, ಸಾಲುಂಡಿ ದೊರೆಸ್ವಾಮಿ ಇತರರು ಇದ್ದರು.
ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಕೆ.ಬಿ.ಲಿಂಗರಾಜು (ಸಮಾಜ ಸೇವೆ), ಡಾ.ಪಿ.ಮಾಲೇಗೌಡ (ವೈದ್ಯಕೀಯ) ಎಂ.ಬಿ.ಗುರುಸ್ವಾಮಿ (ಸಮಾಜ ಸೇವೆ) ಎಂ. ರವಿ (ಪತ್ರಿಕೋದ್ಯಮ), ಪಿ. ರಾಜೇಶ್ವರಿ (ಸಹಕಾರ ಕ್ಷೇತ್ರ), , ಎಚ್.ಆರ್. ಪ್ರಸನ್ನಕುಮಾರ್ (ಯೋಧ), ಸೋಮಶೇಖರ್ (ಸಮಾಜ ಸೇವೆ), ಮಲ್ಲೇಶ್ (ಸಿಐಎಸ್‌ಎಫ್ ಯೋಧ), ಆರ್. ಲಕ್ಷ್ಮಿ (ಪೌರಕಾರ್ಮಿಕರು) ಅವರಿಗೆ ಸಂಗೊಳ್ಳಿ ರಾಯಣ್ಣ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.