ಮೈಸೂರಲ್ಲಿ ವಿವೇಕ ಸ್ಮಾರಕ ಕೂಡಾ ಹೆಗ್ಗುರುತಾಗಲಿ: ಶ್ರೀದತ್ತ ವಿಜಯಾನಂದ ಸ್ವಾಮೀಜಿ
ನಗರದ ವಿವೇಕ ಸ್ಮಾರಕದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣೆ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ, ಟಿ.ಎಸ್.ಶ್ರೀವತ್ಸ, ಸ್ವಾಮಿ ಮುಕ್ತಿದಾನಂದಜೀ, ಸ್ವಾಮಿ ಸರ್ವಲೋಕಾನಂದಜೀ ಮಹಾರಾಜ್, ಸ್ವಾಮಿ ಶುದ್ಧಿದಾನಂದಜೀ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜರಾಳಿದ ಸಾಂಸ್ಕೃತಿಕ ನಗರಿಯಲ್ಲಿ ಹಲವಾರು ಹೆಗ್ಗುರುತುಗಳು ಇವೆ
ವಿವೇಕಾನಂದರು ಮೈಸೂರಿಗೆ ಬಂದಿದ್ದರು ಎನ್ನುವ ಕುರುಹು ಶಾಶ್ವತವಾಗಿ ಉಳಿಯುವ ಕೆಲಸ ಅಗಲಿದೆ
ಮೈಸೂರು:
ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದಂತೆ ವಿವೇಕ ಸ್ಮಾರಕ ಕೂಡಾ ಹೆಗ್ಗುರುತಾಗಲಿದೆ ಎಂದು ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ಸ್ವಾಮೀಜಿ ಹೇಳಿದರು.
ರಾಜರಾಳಿದ ಸಾಂಸ್ಕೃತಿಕ ನಗರಿಯಲ್ಲಿ ಹಲವಾರು ಹೆಗ್ಗುರುತುಗಳು ಇವೆ. ಅವುಗಳ ಸಾಲಿಗೆ ಈಗ ಸ್ವಾಮಿ ವಿವೇಕಾನಂದ ಸ್ಮಾರಕವೂ ಸೇರ್ಪಡೆಗೊಂಡಿದೆ. ಈ ಮೂಲಕ ವಿವೇಕಾನಂದರು ಮೈಸೂರಿಗೆ ಬಂದಿದ್ದರು ಎನ್ನುವ ಕುರುಹು ಶಾಶ್ವತವಾಗಿ ಉಳಿಯುವ ಕೆಲಸ ಅಗಲಿದೆ ಎಂದರು.
ಭಾರತ ಮಾತ್ರವಲ್ಲ ವಿಶ್ವದ ಎಲ್ಲರೂ ಚನ್ನಾಗಿರಬೇಕು ಎನ್ನುವ ಅಭಿಲಾಸೆಯನ್ನು ಸ್ವಾಮಿ ವಿವೇಕಾನಂದರು ವ್ಯಕ್ತಪಡಿಸುತ್ತಿದ್ದರು. ಅಂತವರ ಹೆಸರು ಚಿರಸ್ಥಾಯಿಯಾಗುವಂತಹ ಕಾರ್ಯ ನಡೆದಿದೆ. ವಿವೇಕಾನಂದ ಪ್ರತಿಬಿಂಬದಂತೆ ಇರುವ ಈ ಕೇಂದ್ರದ ಮೂಲಕ ಯುವ ಜನಾಂಗಕ್ಕೆ ಜ್ಞಾನ, ಮಾರ್ಗದರ್ಶನ ದೊರೆಯುವಂತೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಕಾಲದಲ್ಲಿ ಇದ್ದಂತೆ ಇಂದು ಕೂಡಾ ಯುವಕರು ಎಚ್ಚೆತ್ತುಕೊಳ್ಳಬೇಕಿದ್ದು, ಒಗ್ಗಟ್ಟಿನ ಮಾರ್ಗದರ್ಶಕರು ಬೇಕಿದೆ ಎಂದರು.
ಬ್ರಿಟಿಷರ ಆಳ್ವಿಕೆಯಲ್ಲಿ ದಾಸ್ಯದಿಂದ ಯುವಕರು ನರಳುತ್ತಿದ್ದರು. ಸ್ವಾಮಿ ವಿವೇಕಾನಂದರು ಯುವಕರನ್ನು ಎಚ್ಚರಿಸುವ ಕೆಲಸ ಮಾಡಿ ಸರಿಯಾದ ಮಾರ್ಗ ತೋರಿದರು. ಈಗಲೂ ಯುವ ಜನಾಂಗ ಎಚ್ಚೆತ್ತುಕೊಂಡಿದೆ ಎನ್ನುವುದಕ್ಕೆ ದೆಹಲಿ ಸೇರಿದಂತೆ ದೇಶದೆಲ್ಲೆಡೆ ನಡೆದ ಪ್ರತಿಭಟನೆಗಳು ಸಾಕ್ಷಿ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವವರು ಬೇಕಾಗಿದ್ದಾರೆ ಎಂದರು.
ಸಾಮಾಜಿಕ ಜಾಲತಾಣ, ಮೊಬೈಲ್ ಹಾವಳಿಯ ನಡುವೆಯೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಯುವ ಜನಾಂಗ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದರೆ ವಿವೇಕಾನಂದರ ಮಾತುಗಳು ಈಗಲೂ ಎಚ್ಚರಿಸಿದಂತೆ ಇದೆ. ಆದ್ದರಿಂದ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವವರು ಬೇಕಾಗಿದ್ದಾರೆ ಎಂದು ಹೇಳಿದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಸ್ವಾಮಿ ಸರ್ವಲೋಕಾನಂದ ಮಹಾರಾಜ್, ಶಾಸಕ ಟಿ.ಎಸ್.ಶ್ರೀವತ್ಸ, ಸ್ವಾಮಿ ಶುದ್ಧಿದಾನಂದಜೀ ಇತರರು ಇದ್ದರು.