ಬಡವರ ಮಕ್ಕಳು ಆಡಳಿತ ಸೇವೆಗೆ ಸೇರಲಿ

ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದೇವರತ್ನ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಎಂ.ಶಿವಪ್ರಸಾದ್ ಮಾತನಾಡಿದರು. ಬಿ.ಮಹದೇವಸ್ವಾಮಿ, ಶ್ರೀನಿವಾಸ ಸಾಗರ್, ಸುರೇಶ್, ಶಿವಕುಮಾರ್ ಎಸ್. ಪಿಲ್ಲಳ್ಳಿ, ದೇವಯ್ಯ, ರಂಗಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದೇವರತ್ನ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಎಂ.ಶಿವಪ್ರಸಾದ್ ಮಾತನಾಡಿದರು. ಬಿ.ಮಹದೇವಸ್ವಾಮಿ, ಶ್ರೀನಿವಾಸ ಸಾಗರ್, ಸುರೇಶ್, ಶಿವಕುಮಾರ್ ಎಸ್. ಪಿಲ್ಲಳ್ಳಿ, ದೇವಯ್ಯ, ರಂಗಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವರತ್ನ ಫೌಂಡೇಶನ್ ಸಂಸ್ಥಾಪಕ, ವಕೀಲ ಎಂ.ಶಿವಪ್ರಸಾದ್ ಆಶಯ
ತಿ.ನರಸೀಪುರ: ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಕೂಡ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು ಎಂಬ ಅಭಿಲಾಷೆಯಿಂದ ದೇವರತ್ನ ಫೌಂಡೇಶನ್ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಫೌಂಡೇಶನ್ ಸಂಸ್ಥಾಪಕ ಹಾಗೂ ವಕೀಲ ಎಂ.ಶಿವಪ್ರಸಾದ್ ಹೇಳಿದರು. 
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ದೇವರತ್ನ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 2026-27ನೇ ಶೈಕ್ಷಣಿಕ ಸಾಲಿನ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಧಿಕಾರಿಗಳಾಗುವ ಕನಸನ್ನು ಕಾಣುವ ಮಕ್ಕಳಿಗೆ ಆರ್ಥಿಕ ಹೊರೆಯಾಗದಂತೆ ಕಾರ್ಯಾಗಾರದಲ್ಲಿ ನುರಿತ ಶಿಕ್ಷಕರಿಂದ ಬೋಧನೆಯನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದರು.
ಆರ್ಥಿಕವಾಗಿ ಹಿಂದುಳಿದ ಜನರಿಗೆ ಮೂಲಸೌಕರ್ಯವನ್ನು ಕಲ್ಪಿಸಿ, ಮಕ್ಕಳ ಶಿಕ್ಷಣಕ್ಕೆ ತಾಂತ್ರಿಕ ಪರಿಕರಗಳನ್ನು ಉಚಿತವಾಗಿ ಕೊಟ್ಟಿದ್ದೇವೆ. ದೇವರತ್ನ ಫೌಂಡೇಶನ್ ಯಾವೊಂದು ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತವಾದ ಸಂಸ್ಥೆಯಲ್ಲ. ಹಳ್ಳಿಗಾಡಿನ ಹಿನ್ನೆಲೆಯಿರುವ ಬಡವರ ಮಕ್ಕಳಿಗೆ ಆಶ್ರಯವಾಗುವ ಶೈಕ್ಷಣಿಕ ಸಂಸ್ಥೆಯಾಗಿದೆ. ತರಬೇತಿ ಪಡೆದ ವಿದ್ಯಾರ್ಥಿಗಳು ಮುಂದಿನ ವರ್ಷದಲ್ಲಿ ಆಡಳಿತ ಸೇವೆಯ ವಿವಿಧ ಹುದ್ದೆಗಳನ್ನು ಅಲಂಕರಿಸಬೇಕೆಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಮಹದೇವಸ್ವಾಮಿ, ದೇವರತ್ನ ಪೌಂಡೇಶನ್ ನ ಉಪಾಧ್ಯಕ್ಷ ಶ್ರೀನಿವಾಸ ಸಾಗರ್, ಮಾರ್ಗದರ್ಶಕರಾದ ಸುರೇಶ್, ಶಿವಕುಮಾರ್ ಎಸ್. ಪಿಲ್ಲಳ್ಳಿ, ಖಜಾಂಚಿ ದೇವಯ್ಯ, ಸಂಚಾಲಕರಾದ ವಿಠಲ ಮಂಜುನಾಥ್, ನಾಗರಾಜ್, ರಂಗಸ್ವಾಮಿ, ಶಿವಕುಮಾರ್ ರಾಮಸಮುದ್ರ, ಸದಸ್ಯರಾದ ಶ್ರೀಕಾಂತ್, ಪುನೀತ್, ಕುಮಾರ್, ಹರೀಶ್, ನಿತಿನ್ ಚಕ್ರವರ್ತಿ, ವಿನೋದ್‌ರಾಜ್, ಸುರೇಶ ಹಾಗೂ ವಿದ್ಯಾರ್ಥಿಗಳು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net