ಎನ್‌ಎಸ್‌ಎಸ್ ಸ್ವಚ್ಛತೆ ಪಾಠ ಹೇಳಿಕೊಡುವ ವೇದಿಕೆಯಾಗಲಿ

ಹುಣಸೂರು ತಾಲೂಕು ಕಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ಶ್ರೀ ನಟರಾಜ ಸ್ವಾಮೀಜಿ ಉದ್ಘಾಟಿಸಿದರು. ಡಾ.ಜೆ.ಸಿ.ನಾಗೇಂದ್ರ, ಡಾ.ಯಮುನಾ ನಾಗೇಂದ್ರ,  ಹರವೆ ಶ್ರೀಧರ್, ಭೋಗಪ್ಪ, ಎಚ್.ಬಿ.ಕಾರ್ತಿಕ್ ಇತರರಿದ್ದರು.
ಹುಣಸೂರು ತಾಲೂಕು ಕಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ಶ್ರೀ ನಟರಾಜ ಸ್ವಾಮೀಜಿ ಉದ್ಘಾಟಿಸಿದರು. ಡಾ.ಜೆ.ಸಿ.ನಾಗೇಂದ್ರ, ಡಾ.ಯಮುನಾ ನಾಗೇಂದ್ರ, ಹರವೆ ಶ್ರೀಧರ್, ಭೋಗಪ್ಪ, ಎಚ್.ಬಿ.ಕಾರ್ತಿಕ್ ಇತರರಿದ್ದರು.
Published on
ಹುಣಸೂರು: ಎನ್‌ಎಸ್‌ಎಸ್ ಶಿಬಿರಗಳು ಪರಿಸರ ಸ್ವಚ್ಛತೆಯ ಜತೆಗೆ ಮನಸ್ಸಿನ ಸ್ವಚ್ಛತೆಯ ಪಾಠವನ್ನೂ ಹೇಳಿಕೊಡುವ ವೇದಿಕೆಗಳಾಬೇಕೆಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಢಿದೆರು.
ಎನ್‌ಎಸ್‌ಎಸ್ ಮಹಾತ್ಮಾ ಗಾಂಧೀಜಿ ಅವರ ಕನಸಿನ ರೂಪವಾಗಿದೆ. ದೇಶದ ಯುವಶಕ್ತಿ ಸಮಾಜ ಸೇವೆಯೊಂದಿಗೆ ನಾಯಕತ್ವ ಗುಣ, ಸಹನೆ, ಸಹಬಾಳ್ವೆ ಮುಂತಾದ ಸಾತ್ವಿಕ ಗುಣಗಳನ್ನು ಕಲಿಯವಂತಾಗಲು ಘಟಕಗಳನ್ನು ಶಾಲಾ-ಕಾಲೇಜು ಹಂತಗಳಲ್ಲಿ ಸ್ಥಾಪಿಸಲು ಶ್ರಮಿಸಿದರು. ಎನ್‌ಎಸ್‌ಎಸ್ ಕೇವಲ ಸಮಾಜ ಸೇವೆಯ ಪ್ರಾತ್ಯಕ್ಷಿಕೆ ಎನ್ನುವಂತಾಗಬಾರದು. ವಿಶೇಷ ಶಿಬಿರದ ವಾರಕಾಲದಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವ ಪಕ್ವವಾಗುವತ್ತ ಸಾಗಬೇಕು. ಮನಸ್ಸಿನ ಮಲಿನತೆ ತೊಲಗುವಂತಾಗಬೇಕು. ಆ ದಿಕ್ಕಿನಲ್ಲಿ ಯೋಚಿಸುವ ಸಕಾರಾತ್ಮಕ ಮನಸ್ಥಿತಿಯನ್ನು ರೂಪಿಸುವ ವೇದಿಕೆಯಾದಲ್ಲಿ ಎನ್‌ಎಸ್‌ಎಸ್ ನಿಜಕ್ಕೂ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಯುವ ಮುಖಂಡ ಹರವೆ ಶ್ರೀಧರ್ ಮಾತನಾಡಿ, ಸೇವಾ ಮನೋಭಾವನೆಯನ್ನು ನಿಸ್ವಾರ್ಥವಾಗಿ ಮೈಗೂಡಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.'
ಸಂಸ್ಥೆಯ ಅಧ್ಯಕ್ಷೆ ಡಾ.ಯಮುನಾ ನಾಗೇಂದ್ರ, ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಸಿ.ನಾಗೇಂದ್ರ ಮಾತನಾಡಿದರು. ಪಿಡಿಒ ಮಂಜುಳಾ, ಪ್ರಾಂಶುಪಾಲ ಎಚ್.ಬಿ.ಕಾರ್ತಿಕ್ ಯಜಮಾನ ಭೋಗಪ್ಪ,. ಕೆ.ಪಿ.ಶಿವಮೂರ್ತಿ, ನಿರ್ವಾಣಪ್ಪ, ನೇತ್ರಾವತಿ, ವಿಷಕಂಠಪ್ಪ, ಸವಿತಾ, ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net