ಕೂಡಗಿ ಮಾರಮ್ಮನ ಜಾತ್ರಾ ಮಹೋತ್ಸವ

ಸರಗೂರು ತಾಲೂಕಿನ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದಲ್ಲಿ ಕೂಡಗಿ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು ತಾಲೂಕಿನ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದಲ್ಲಿ ಕೂಡಗಿ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Published on
ಸರಗೂರು : ತಾಲೂಕಿನ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕೂಡಗಿ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಇತ್ತೀಚೆಗೆ ಎರಡು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ಕುರ್ಣೇಗಾಲ ಮತ್ತು ಕೂಡಗಿ ಗ್ರಾಮಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಗ್ರಾಮ ಕಂಗೊಳಿಸುತ್ತಿತ್ತು.
ಮಂಗಳವಾದ ಬೆಳಗ್ಗೆ ನುಗು ನದಿಯ ಹಿನ್ನೀರಿನಿಂದ ಮಂಗಳವಾಧ್ಯ, ಸತ್ತಿಗೆಗಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಮಾರಮ್ಮ ದೇವರ ಕಳಸವನ್ನು ಹೊತ್ತು ತರಲಾಯಿತು. ಬಳಿಕ ಸಾವಿರಾರು ಭಕ್ತರು ಮಾರಮ್ಮ ದೇವಿಗೆ ತಪ್ಪಿನ ಪೂಜೆ ಜತೆ ದರ್ಶನ ಪಡೆದು ಪುನೀತರಾದರು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸತ್ತಿಗೆಗಳ ಮೆರವಣಿಗೆ ಮಾಡಲಾಯಿತು.
ಅಕ್ಕಪಕ್ಕದ ಗ್ರಾಮಗಳಾದ ಆಲನಹಳ್ಳಿ, ಕಾಡಬೇಗೂರು, ಮುತ್ತಿಗೆಹುಂಡಿ, ಶಿವಪುರ ಕಂದಲಿಕೆ, ಕಾನಕನಹಳ್ಳಿ, ಮುಗುತನ ಮೂಲೆ, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಸ್ಥರು ಜಾತ್ರಾಮಹೋತ್ಸವದಲ್ಲಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net