ಕೋತ್ತೇಗಾಲ ಗ್ರಾಮದಲ್ಲಿ ಶ್ರೀ ಗುಜ್ಜಮ್ಮತಾಯಿ ಕೊಂಡೋತ್ಸವ

ಸರಗೂರು ತಾಲೂಕಿನ ಕೋತ್ತೆಗಾಲ ಗ್ರಾಮದಲ್ಲಿ ಶ್ರೀ ಗುಜಮ್ಮ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು
ಸರಗೂರು ತಾಲೂಕಿನ ಕೋತ್ತೆಗಾಲ ಗ್ರಾಮದಲ್ಲಿ ಶ್ರೀ ಗುಜಮ್ಮ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು
Published on
ಮುಂಜಾನೆಯಿಂದಲೇ ಉತ್ಸವ ಮೂರ್ತಿಯೊಂದಿಗೆ ಶ್ರೀ ಗುಜಮ್ಮ ಹಾಗೂ ಮಾರಮ್ಮನ ಭಕ್ತರು, ಸತ್ತಿಗೆ, ಸೂರಿಪಾನಿ, ಚಾಮರ, ವಾದ್ಯ, ಮೇಳ, ಕೊಂಬುಕಹಳೆಗಳೊಂದಿಗೆ ಮೆರವಣಿಗೆ ನಡೆಸಿದರು. ಕೊಂಡೋತ್ಸವ ಮುನ್ನ ಕಬಿನಿ ಜಲಾಶಯದ ನದಿಯಿಂದ ಮಂಗಳವಾದ್ಯ ದೊಂದಿಗೆ ಗುಜ್ಜಮ್ಭ ತಾಯಿ.ಮಾರಮ್ಮ.ಶನೇಶ್ವರ.ವಿಗ್ರಹ ಮೂರ್ತಿಯನ್ನು ಪಲ್ಲಕ್ಕಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ.ದೇವಾಲಯಕ್ಕೆ ತರಲಾಯಿತು.ಜಾತ್ರಾ ಮಹೋತ್ಸವ ಅಂಗವಾಗಿ ಹಿನ್ನೆಲೆಯಲ್ಲಿ ದೇವಾಲಯ ಹಾಗೂ ಇಡೀ ಗ್ರಾಮವನ್ನು ಹಸಿರು ತೋರಣಗಳಿಂದ ಸಿಂಗರಿಸಿ ಹೂವು ವಿದ್ಯುತ್ ದೀಪಗಳಿಂದ ಅಲಂಕರಿಸಿ.ನಂತರ ಗ್ರಾಮದ ಬಳಿ ಇರುವ ಕಬಿನಿ ಜಲಾಶಯ ಹೊಳಯಲ್ಲಿ ಗ್ರಾಮ ದೇವತೆಗೆ ಮೊದಲ ಪೂಜೆ ಸಲ್ಲಿಸಿ,ಶ್ರೀಗುಜ್ಜಮ್ಮ . ಮಾರಮ್ಮ.ಉತ್ಸವಮೂರ್ತಿ, ಶನೇಶ್ವರ ಮೂರ್ತಿ.ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನೀರಿನಲ್ಲಿ ಸ್ವಚ್ಚಗೂಳಿಸಿದ ಬಳಿಕ ಹೊಸ ಕುಂಭಗಳಲ್ಲಿ ನೀರು ತುಂಬಿ, ಪೂಜೆ ಸಲ್ಲಿಸಿದರು.
ಬಳಿಕ ಉತ್ಸವ ಮೂರ್ತಿಗೆ ಬಣ್ಣ ಬಣ್ಣದ ಪುಪ್ಪಗಳಿಂದ ಅಲಂಕಾರಗೊಳಿಸಿ, ಸತ್ತಿಗೆ ಸೂರಿಪಾನಿ, ಚಾಮರಗಳಿಗೆ ಹೂ ಹೊಂಬಾಳೆಯಿಂದ ಶೃಂಗರಿಸಿ ಕೊಂಬು ಕಹಳೆ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕೊಂಡೋತ್ಸವ ಸ್ಥಳಕ್ಕೆ ಬರುತ್ತಿದಂತೆಯೇ ಭಕ್ತರು ಜೈಕಾರ ಕೂಗಿದರು. ಅರ್ಚಕರು ಶ್ರೀ ಗುಜಮ್ಮ ಮೂರ್ತಿ ಹೊತ್ತುಕೊಂಡು ಕೊಂಡ ಹಾಯ್ದರು. ಅವರ ಜತೆಯಲ್ಲಿ ಸತಿಗೆ ಸೂರಿ ಪಾನಿ, ಚಾಮರ ಹಿಡಿದ ಭಕ್ತರು ಕೂಡ ಕೊಂಡ ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರೆದರು.
ಗ್ರಾಮದ ಎಲ್ಲಾ ವರ್ಗದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆದು, ಪ್ರತಿ ಬೀದಿಗಳಲ್ಲಿ ಭಕ್ತರು ಸಗಣಿ ನೀರಿನಿಂದ ರಸ್ತೆ ಶುದ್ಧಗೊಳಿಸಿ, ರಂಗೋಲಿ ಇಟ್ಟಿದ್ದರು. ಹೂವು, ಹಣ್ಣು ಕಾಯಿ ಇಟ್ಟು, ಪೂಜೆ ಸಲ್ಲಿಸಿ, ತಂಬಿಟ್ಟಿನ ಆರತಿ ಮಾಡಿ ಹರಕೆ ತೀರಿಸಿದರು. ಮೆರವಣಿಗೆ ಉದ್ದಕ್ಕೂ ಭಕ್ತರು ಮಾರಿ ಕುಣಿತ ಕುಣಿದು, ಒಬ್ಬರಿಗೂಬ್ಬರು ಓಕುಳಿ ಎರಚಾಡಿಕೊಂಡು ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದರು. ತಾಲ್ಲೂಕಿನ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಗುಜ್ಜಮ್ಮ ತಾಯಿ.ಮಾರಮ್ಮ ಹಾಗೂ ಶನೇಶ್ವರ ಸ್ವಾಮಿಯ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಬುಧವಾರ ಸಂಜೆ ಕೊತ್ತೇಗಾಲ.ಜಯನಗರ.ಕಾಳೆಗೌಡನಹುಂಡಿ ಈ ಗ್ರಾಮಗಳಲ್ಲಿ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದಲ್ಲದೆ ಸೋಮವಾರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಂಗಳವಾರವು ದೇವರಿಗೆ ನಾನಾ ಪೂಜಾ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ರವರು ಶ್ರೀ ಗುಜಮ್ಮ ಜಾತ್ರಾ ಕೊಂಡೋತ್ಸವ ಬೇಟಿ ನೀಡಿ ತಾಯಿಯ ದರ್ಶನ ಪಡೆದು ಪುನೀತರಾದರು.
ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಪ್ರಸನ್ನ ಕುಮಾರ್, ಪಿಎಸ್ಐ ಆರ್ ಕಿರಣ್ ಸ್ಥಳದಲ್ಲೆ ಹಾಜರಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಈ ಸಂದರ್ಭದಲ್ಲಿ ಗುಡಿಗೌಡರು ಬಸವರಾಜಪ್ಪ,ನಾಡಗೌಡರು ಶಂಕರಲಿಂಗಪ್ಪ, ಗ್ರಾಪಂ ಗ್ರಾಪಂ ಅಧ್ಯಕ್ಷ ಚಲುವಪ್ಪ, ಸದಸ್ಯರಾದ ರೀತಿ, ಶೋಭಾ ಬಸವಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ,ಎಲ್ಲಾ ಸಮುದಾಯದ ಯಜಮಾನರಗಳು ಕಾಳಸ್ವಾಮಿ, ಚನ್ನಬಸವದೇವರು, ರಾಮಮಂದಿರ ಸಮಿತಿ ಅಧ್ಯಕ್ಷ ಭೀಮನಾಯಕ, ಚಲುವಚಾರಿ,ಮಹದೇವಶಟ್ಟಿ,ಸೋಮಶಟ್ಟಿ, ಚಿಕ್ಕಣ್ಣ, ನಾಗಯ್ಯ, ಮಾದಯ್ಯ, ಮುಖಂಡರು ರತ್ನಯ್ಯ, ನಂಜಪ್ಪ, ಸುಂದರ್,ಶಿವಣ್ಣ, ದೊಡ್ಡರಾಜು, ಪುಟ್ಟೇಗೌಡ, ಸಣ್ಣಸ್ವಾಮಿ ಶೆಟ್ಟಿ, ಮಹದೇವ, ರಾಘವೇಂದ್ರ, ಚಂದ್ರ,ಕೆ ವಿ ಗೋಪಾಲ್,ಕೆ ಡಿ ನಾಗರಾಜು,ಪುಟ್ಟಾಣಿ, ವಿಜಯೇಂದ್ರ ಕುಮಾರ್, ರಾಜೇಶ್, ಇನ್ನೂ ಮುಖಂಡರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net