ಜೆಡಿಎಸ್ ಕಾರ್ಯಕರ್ತರಿಂದ ಕನ್ನಡ ರಾಜ್ಯೋತ್ಸವ

ಬನ್ನೂರಿನ ಸಂತೆಮಳದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಕುಂತನಹಳ್ಳಿ ಎಲ್‌ಐಸಿ ದೇವರಾಜು, ಜೆಡಿಎಸ್ ಮುಖಂಡರಾದ ಜಯರಾಮೇಗೌಡ, ದೇವರಾಜು, ಜಯರಾಮು, ನಾರಾಯಣಸ್ವಾಮಿ, ಕುಂತನಹಳ್ಳಿ ಚಲುವರಾಜು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಬನ್ನೂರಿನ ಸಂತೆಮಳದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಕುಂತನಹಳ್ಳಿ ಎಲ್‌ಐಸಿ ದೇವರಾಜು, ಜೆಡಿಎಸ್ ಮುಖಂಡರಾದ ಜಯರಾಮೇಗೌಡ, ದೇವರಾಜು, ಜಯರಾಮು, ನಾರಾಯಣಸ್ವಾಮಿ, ಕುಂತನಹಳ್ಳಿ ಚಲುವರಾಜು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Published on
ಬನ್ನೂರು: ಪಟ್ಟಣದ ಸಮೀಪದ ಸಂತೆಮಾಳದಲ್ಲಿ ಜೆಡಿಎಸ್ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಆಚರಿಸಿದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ ಮಾತನಾಡಿ, ಕನ್ನಡ ನಾಡು ಅತ್ಯಂತ ಸಂಪತ್ಬರಿತ ನಾಡನಾಗಿದ್ದು, ಕನ್ನಡ ನಾಡಿಗೆ ಪ್ರಾಚೀನ ಇತಿಹಾಸವಿದೆ. ಅತ್ಯಂತ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಂತ ಮಾಹಾ ಮಹಿಮರು ಜನಿಸಿದಂತ ನಾಡಿನಲ್ಲಿ ನಾವೆಲ್ಲರು ಜೀವಿಸುವಂತ ಪುಣ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.
ಪ್ರತಿಯೊಬ್ಬರು ಕನ್ನಡ ನಾಡು ನುಡಿಯ ಬಗ್ಗೆ ಅತ್ಯಂತ ಹೆಚ್ಚಿನ ಮಹತ್ವ ನೀಡುವ ಮೂಲಕ ಕನ್ನಡಿಗರು ಒಗ್ಗಟ್ಟಿನಿಂದ ಬಾಳ್ವೆ ಮಾಡಬೇಕು. ನ.1 ಮಾತ್ರ ಕನ್ನಡಕ್ಕೆ ಸೀಮಿತವಾಗದೇ ಪ್ರತಿ ತಿಂಗಳು ಕನ್ನಡ ನೆನೆಯುವಂತ ಮಹತ್ವದ ಕೆಲಸ ಆಗಬೇಕು ಎಂದು ಹೇಳಿದರು.
ಕುಂತನಹಳ್ಳಿ ಎಲ್‌ಐಸಿ ದೇವರಾಜು ಮಾತನಾಡಿ, ಎಲ್ಲ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತಸವಾಗಿದೆ. ಮುಂದಿನ ದಿನದಲ್ಲಿ ಹಲವಾರು ವಿವಿಧ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಅದ್ದೂರಿಯಾಗಿ ಕನ್ನಡ ದಿನವನ್ನು ಆಚರಿಸೋಣ.ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಗೌರವ ಸಲ್ಲಿಸುವ ಮೂಲಕ, ಕನ್ನಡಿಗರೆಲ್ಲರು ಸಹೋದರಂತೆ ಬಾಳೋಣ ಎಂದು ಕರೆನೀಡಿದರು.
ಜೆಡಿಎಸ್ ಮುಖಂಡರಾದ ಜಯರಾಮೇಗೌಡ, ಬೀಡನಹಳ್ಳಿ ದೇವರಾಜು, ಜಯರಾಮು, ನಾರಾಯಣಸ್ವಾಮಿ, ರಂಗಸ್ವಾಮಿ, ಕುಂತನಹಳ್ಳಿ ಚಲುವರಾಜು, ಅತ್ತಳ್ಳಿ ಸತೀಶ್, ಬೀಡನಹಳ್ಳಿ ಕೋಳಿ ದೇವರಾಜು, ಅತ್ತಳ್ಳಿ ಮಹದೇವು, ಅತ್ತಳ್ಳಿ ಹನುಮಂತು, ಯಾಚೇನಹಳ್ಳಿ ಶಂಕರಣ್ಣ, ಎಲ್‌ಐಸಿ ಮಾದೇಗೌಡ, ಸೌಡಿಕೃಷ್ಣೇಗೌಡ, ನಾಗಣ್ಣ, ಕುಂತನಹಳ್ಳಿ ಕೆಂಪಣ್ಣ, ಚನ್ನೇಗೌಡ, ಚಾಮನಹಳ್ಳಿ ರಂಗಸ್ವಾಮಿ, ಅತ್ತಳ್ಳಿ ನಾಗರಾಜು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಗು ವಿನಾಯಕ ಗೆಳೆಯರ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net