ಸಹಬಾಳ್ವೆಗೆ ಕನ್ನಡದ ಆಶ್ರಯ ಮುಖ್ಯ

ಹುಣಸೂರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್‌ರನ್ನು ಮೈಸೂರಿನ ಆರ್‌ಬಿಐ ವತಿಯಿಂದ ನಾಗರಿಕ ಸನ್ಮಾನ ಮಾಡಲಾಯಿತು. ಹಿರಿಯ ಪ್ರಧಾನ ವ್ಯವಸ್ಥಾಪಕ  ಜೋಗಾರೆಡ್ಡಿ, ಪ್ರಧಾನ ವ್ಯವಸ್ಥಾಪಕ ಶ್ಯಾಂಪ್ರಸಾದ್, ಬಾನು ಪ್ರಕಾಶ್, ಶಿವಲಿಂಗ ಸ್ವಾಮಿ, ರಾಜಣ್ಣ, ಸವಿತ ಇತರರಿದ್ದಾರೆ.
ಹುಣಸೂರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್‌ರನ್ನು ಮೈಸೂರಿನ ಆರ್‌ಬಿಐ ವತಿಯಿಂದ ನಾಗರಿಕ ಸನ್ಮಾನ ಮಾಡಲಾಯಿತು. ಹಿರಿಯ ಪ್ರಧಾನ ವ್ಯವಸ್ಥಾಪಕ ಜೋಗಾರೆಡ್ಡಿ, ಪ್ರಧಾನ ವ್ಯವಸ್ಥಾಪಕ ಶ್ಯಾಂಪ್ರಸಾದ್, ಬಾನು ಪ್ರಕಾಶ್, ಶಿವಲಿಂಗ ಸ್ವಾಮಿ, ರಾಜಣ್ಣ, ಸವಿತ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಸಾಹಿತಿ ಡಾ. ಮಾದುಪ್ರಸಾದ್ ಅಭಿಪ್ರಾಯ
  • ಡಾ.ಮಾದುಪ್ರಸಾದ್ ಅವರಿಗೆ ನಾಗರಿಕ ಸನ್ಮಾನ
  • 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಹುಣಸೂರು : ಕನ್ನಡ ಭಾಷೆಗೆ ತಾಯಿಯಂತೆ ಕಾಪಾಡುವ ಹೃದಯವಿದೆ ಎಂದು ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಡಾ. ಮಾದುಪ್ರಸಾದ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮೈಸೂರಿನ ನೋಟು ಮುದ್ರಣ ಘಟಕದಿಂದ ನಗರದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕನ್ನಡ ಭಾಷೆಯು ಹರಿಯುವ ನದಿಯಂತೆ ಎಲ್ಲವನ್ನೂ ತನ್ನ ಒಡಲಲ್ಲಿ ಕರಗಿಸಿ ಅಡಗಿಸಿಕೊಳ್ಳುವ ತಾಯಿಯ ಗುಣವಿದೆ. ಆದ್ದರಿಂದಲೇ ಎಲ್ಲ ಭಾಷೆಗಳ ಪ್ರಭಾವವನ್ನು ಅರಗಿಸಿಕೊಂಡು ಹಸನಾಗಿ ಬೆಳೆದಿದೆ ಎಂದರು.
ದ್ರಾವಿಡ ಭಾಷೆಗಳಲ್ಲಿ ಸಾಮ್ಯತೆ ಇದೆ, ಸಾಂಸ್ಕೃತಿಕ, ಆಚಾರ ವಿಚಾರಗಳಲ್ಲಿ ಹೋಲಿಕೆ ಇದೆ. ಆದ್ದರಿಂದ ಭಾಷೆಯಲ್ಲಿ ಭ್ರಾತೃತ್ವವಿರುವಂತೆ ಜನರಲ್ಲಿಯೂ ಸಹೋದರತೆ ಸಾಧಿಸಿದಾಗ ಮಾತ್ರ ಸಾಮರಸ್ಯ ತರಬಹುದಾಗಿದೆ. ಕೇವಲ ಮಾತು ಮಾತೃಭಾಷೆ ಆಗಲಾರದು. ಭಾವನಾತ್ಮಕ ಬೆಸುಗೆ ಸಹಿತ ನೆರೆ ರಾಜ್ಯದವರ ಜತೆಗೆ ಬದುಕು ಸಾಧಿಸುವುದನ್ನು ಕಲಿಯಲು ಕನ್ನಡ ಭಾಷೆಯಷ್ಟು ಪಕ್ವದ ಭಾಷೆ ಇನ್ನೊಂದಿಲ್ಲ. ನಮಗೆ ಇದೊಂದು ವರವಾಗಿದೆ. ಮನುಷ್ಯ ಮನುಷ್ಯರ ನಡುವೆ ಸಹಬಾಳ್ವೆಗೆ ಕನ್ನಡದ ಆಶ್ರಯ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಡಾ.ಮಾದುಪ್ರಸಾದ್ ಅವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೈಸೂರಿನ ಶಾಖೆಯ ಕನ್ನಡ ಬಳಗದ ವತಿಯಿಂದ ನಾಗರಿಕ ಸನ್ಮಾನ ಮಾಡಲಾಯಿತು. ಸಮಾರಂಭದಲ್ಲಿ ಹಿರಿಯ ಪ್ರಧಾನ ವ್ಯವಸ್ಥಾಪಕ ಜೋಗಾರೆಡ್ಡಿ, ಪ್ರಧಾನ ವ್ಯವಸ್ಥಾಪಕ ಶ್ಯಾಂಪ್ರಸಾದ್, ಬಾನು ಪ್ರಕಾಶ್, ಶಿವಲಿಂಗ ಸ್ವಾಮಿ, ರಾಜಣ್ಣ, ಸವಿತ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net