ಜೆಕೆ ಟೈರ್ ನಿವ್ವಳ ಲಾಭದಲ್ಲಿ 83% ಹೆಚ್ಚಳ ಕಂಡು 188 ಕೋಟಿ ರೂ.ಗೆ ಏರಿಕೆ

ಡಾ. ಸಿಂಘಾನಿಯಾ
ಡಾ. ಸಿಂಘಾನಿಯಾ
Published on

ಭಾರತದಪ್ರಮುಖ ಟೈರ್ ತಯಾರಕ ಕಂಪನಿಗಳಲ್ಲಿಒಂದಾದ ಜೆಕೆ ಟೈರ್ &ಇಂಡಸ್ಟ್ರೀಸ್ಲಿಮಿಟೆಡ್,2026 ಮಾರ್ಚ್31ಕ್ಕೆಕೊನೆಗೊಂಡ 4ನೇತ್ರೈಮಾಸಿಕ ಮತ್ತು ಸಂಪೂರ್ಣಹಣಕಾಸು ವರ್ಷದ ಲೆಕ್ಕ ಪರಿಶೋಧನೆಯಸಮಗ್ರ ಮತ್ತು ಕ್ರೋಡೀಕೃತ ಹಣಕಾಸುಫಲಿತಾಂಶಗಳನ್ನು ಇಂದು ಪ್ರಕಟಿಸಿದೆ.ಕಂಪನಿಯು4ನೇತ್ರೈಮಾಸಿಕ ಮತ್ತು 2026ಹಣಕಾಸುವರ್ಷದಲ್ಲಿ ಸದೃಢವಾದ ಕಾರ್ಯಕ್ಷಮತೆತೋರಿದೆ.ಆಡಳಿತನಿರ್ದೇಶಕರ ಮಂಡಳಿಯು ಷೇರುದಾರರಿಗೆ200%ಲಾಭಾಂಶಶಿಫಾರಸು ಮಾಡಿದೆ,ಅಂದರೆಪ್ರತಿ ಈಕ್ವಿಟಿ ಷೇರಿಗೆ 4ರೂ.ಪ್ರಕಟಿಸಿದೆ.ಇದುಜೆಕೆ ಟೈರ್‌ನ ನಿಗದಿತ ಧ್ಯೇಯಕ್ಕೆಅನುಗುಣವಾಗಿ ಷೇರುದಾರರ ಮೌಲ್ಯವನ್ನುಸ್ಥಿರವಾಗಿ ಹೆಚ್ಚಿಸುವ ಬದ್ಧತೆಯನ್ನುಪುನರುಚ್ಚರಿಸುತ್ತದೆ.

ಫಲಿತಾಂಶಗಳಕುರಿತು ಪ್ರತಿಕ್ರಿಯಿಸಿದ ಕಂಪನಿಯಅಧ್ಯಕ್ಷ ಮತ್ತು ವ್ಯವಸ್ಥಾಪಕನಿರ್ದೇಶಕ (ಸಿಎಂಡಿ)ಡಾ.ರಘುಪತಿಸಿಂಘಾನಿಯಾ,"2026ರಹಣಕಾಸು ವರ್ಷವು ಜೆಕೆ ಟೈರ್‌ಗೆಒಂದು ಗುರುತಿಸಲಾಗುವ ವರ್ಷವಾಗಿದೆ.ನಾವುಎಲ್ಲಾ ವ್ಯವಹಾರ ವಿಭಾಗಗಳಲ್ಲಿದಾಖಲೆಯ ಪ್ರಮಾಣದಲ್ಲಿ ಮಾರಾಟಮಾಡಿದ್ದೇವೆ.ಇದುವರೆಗೆಅತ್ಯಧಿಕ ಅಂದರೆ 16,384ಕೋಟಿರೂ.ವಾರ್ಷಿಕಕ್ರೋಡೀಕೃತ ಆದಾಯ ಗಳಿಸಿದ್ದೇವೆ,ಬಡ್ಡಿ,ತೆರಿಗೆಗಳು,ಸವಕಳಿಮತ್ತು ನಿಯಮಿತ ಸಾಲ ತೀರುವಳಿಮುಂಚಿನ ಗಳಿಕೆ(ಇಬಿಐಟಿಡಿಎ)ಯಾಗಿ2,089ಕೋಟಿರೂ.ಸಾಧಿಸಿದ್ದೇವೆ,ಇದುಹಿಂದಿನ ವರ್ಷಕ್ಕಿಂತ 25%ಹೆಚ್ಚಾಗಿದೆ"ಎಂದುಹೇಳಿದರು.

"ನಾವುವರ್ಷದಿಂದ ವರ್ಷಕ್ಕೆ ಆದಾಯದಲ್ಲಿ11%ಆರೋಗ್ಯಕರಎರಡಂಕಿಯ ಬೆಳವಣಿಗೆ ದಾಖಲಿಸಿದ್ದು,ಇದಕ್ಕೆಜಿಎಸ್ಟಿ ಮತ್ತು ವೈಯಕ್ತಿಕ ತೆರಿಗೆಸುಧಾರಣೆಗಳು,ಬಡ್ಡಿದರಗಳಇಳಿಕೆ,ಸುಧಾರಿತಆರ್ಥಿಕ ಚಟುವಟಿಕೆ ಮತ್ತು ಹಬ್ಬದಋತುವಿನ ಬೆಂಬಲದೊಂದಿಗೆ ಹೆಚ್ಚಿದಬೇಡಿಕೆಯೇ ಕಾರಣವಾಗಿದೆ.ನಮ್ಮಕಾರ್ಯಕ್ಷಮತೆಯು ನಮ್ಮ ಬ್ರ್ಯಾಂಡ್‌ಗಳಶಕ್ತಿ,ಕಾರ್ಯಾಚರಣೆಶಿಸ್ತು ಮತ್ತು ಮೌಲ್ಯ-ವರ್ಧಿತಬೆಳವಣಿಗೆಯ ಮೇಲೆ ನಾವು ಹೊಂದಿರುವಸ್ಥಿರವಾದ ಗಮನವನ್ನು ಪ್ರತಿಬಿಂಬಿಸುತ್ತಿದೆ"ಎಂದರು.

ಕಂಪನಿಯಭಾರತದ ವ್ಯವಹಾರವು 4ನೇತ್ರೈಮಾಸಿಕದಲ್ಲಿ ಬೆಳವಣಿಗೆಮುಂದುವರೆಸಿದ್ದು,ಇದುಬಲವಾದ ದೇಶೀಯ ಬೇಡಿಕೆಯನ್ನುಪ್ರತಿಬಿಂಬಿಸುತ್ತಿದೆ.ಮೂಲಸಲಕರಣೆಗಳ ಉತ್ಪಾದನೆ(ಒಇ)ಮಾರುಕಟ್ಟೆಯಲ್ಲಿನಪ್ರಭಾವಶಾಲಿ 42%ಬೆಳವಣಿಗೆಯಿಂದಾಗಿ,ಎಲ್ಲಾವಿಭಾಗಗಳಲ್ಲಿ ಮಾರಾಟದ ಪ್ರಮಾಣವುವರ್ಷದಿಂದ ವರ್ಷಕ್ಕೆ 21%ರಷ್ಟುಹೆಚ್ಚಾಗಿದೆ.ಪಶ್ಚಿಮಏಷ್ಯಾ ಸಂಘರ್ಷ ಸೇರಿದಂತೆ ಭೌಗೋಳಿಕರಾಜಕೀಯ ಅನಿಶ್ಚಯಗಳ ಹೊರತಾಗಿಯೂರಫ್ತುಗಳು ಸ್ಥಿರವಾಗಿವೆ.

4ನೇತ್ರೈಮಾಸಿಕ ಅವಧಿಯಲ್ಲಿ ಕ್ರೋಢೀಕೃತಇಬಿಐಟಿಡಿಎ ಗಳಿಕೆ 546ಕೋಟಿರೂ.ಗಳಾಗಿದ್ದು,ವರ್ಷದಿಂದವರ್ಷಕ್ಕೆ ಶೇ.42ರಷ್ಟುಹೆಚ್ಚಳವಾಗಿದೆ.ಹೆಚ್ಚಿನಮಾರಾಟ ಗಾತ್ರಗಳು,ಸುಧಾರಿತಉತ್ಪನ್ನ ಮಿಶ್ರಣ ಮತ್ತು ನಿರಂತರವೆಚ್ಚ ಪರಿಣಾಮಕಾರಿ ಉಪಕ್ರಮಗಳಿಂದಇದು ಸಂಭವಿಸಿದೆ.ತೆರಿಗೆನಂತರದ ಲಾಭ(ಪಿಎಟಿ)ಶೇ.83ರಷ್ಟುತೀವ್ರ ಏರಿಕೆಯಾಗಿ 188ಕೋಟಿರೂ.ಗಳಿಗೆತಲುಪಿದೆ.

ಕಂಪನಿಯಅಂಗಸಂಸ್ಥೆಯಾದ ಮೆಕ್ಸಿಕೋದ ಜೆಕೆಟೋರ್ನೆಲ್,ಕ್ರೋಡೀಕೃತಹಣಕಾಸುಗಳಿಗೆ ಗಣನೀಯ ಕೊಡುಗೆನೀಡಿದೆ.

ಡಾ.ಸಿಂಘಾನಿಯಾಮಾತನಾಡಿ,“ನಾವುಸಾಮರ್ಥ್ಯ ವಿಸ್ತರಣೆ,ದೇಶೀಯಮತ್ತು ರಫ್ತು ಮಾರುಕಟ್ಟೆಗಳಿಗೆಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕನಮ್ಮ ವ್ಯವಹಾರಗಳಿಗೆ ಬಲಿಷ್ಠಅಡಿಪಾಯ ಹಾಕಿದ್ದೇವೆ.ಅಸ್ಥಿರಜಾಗತಿಕ ಪರಿಸರದ ನಡುವೆಯೂ ನಾವುಅಲ್ಪಾವಧಿಯ ಉತ್ಪಾದನೆ ವೆಚ್ಚಸವಾಲುಗಳನ್ನು ಎದುರಿಸುತ್ತಿದ್ದರೂಸಹ,2027ರಲ್ಲಿಲಾಭದಾಯಕ ಬೆಳವಣಿಗೆ ಹೆಚ್ಚಿಸಲುಇದು ನಮಗೆ ಉತ್ತಮ ಸ್ಥಾನ ನೀಡುತ್ತದೆ”ಎಂದರು.

ಜೆಕೆಟೈರ್ ಭಾರತದ ಅತ್ಯಂತ ಸುಸ್ಥಿರಕಂಪನಿಗಳಲ್ಲಿ ಒಂದಾಗಿಗುರುತಿಸಲ್ಪಟ್ಟಿದೆ,ಆಟೋಮೋಟಿವ್ವಲಯದಲ್ಲಿ ಟಾಪ್ 5ಮತ್ತುಆಟೋ ಘಟಕಗಳಲ್ಲಿ ಟಾಪ್ 3ಸ್ಥಾನಗಳನ್ನುಪಡೆದಿದೆ.ಇದುಕಂಪನಿಯ ಜವಾಬ್ದಾರಿಯುತ ಉತ್ಪಾದನಾಪದ್ಧತಿಗಳನ್ನು ಎತ್ತಿ ತೋರಿಸುತ್ತದೆ,ಸುಸ್ಥಿರತೆಯನ್ನುಬಲಪಡಿಸುವುದು ಅದರ ದೀರ್ಘಕಾಲೀನಬೆಳವಣಿಗೆಯ ಕಾರ್ಯತಂತ್ರಕೇಂದ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net