13ರಂದು ಜನರೊಂದಿಗೆ ಜನತಾದಳ

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಪೋಸ್ಟರನ್ನು ಜೆಡಿಎಸ್ ಮುಖಂಡರು ಬಿಡುಗಡೆ ಮಾಡಿದರು.  ಅಭಿಷೇಕ್ ಮಣೇಗಾರ್, ಬಾಲಕೃಷ್ಣ, ಚನ್ನೇಗೌಡ, ಎಂ.ಶಿವಪ್ರಸಾದ್, ಬಸವರಾಜು, ಕೃಷ್ಣ, ಪ್ರಭುಸ್ವಾಮಿ, ಸತೀಶ್, ಸಿದ್ದರಾಜು ಇದ್ದರು.
ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಪೋಸ್ಟರನ್ನು ಜೆಡಿಎಸ್ ಮುಖಂಡರು ಬಿಡುಗಡೆ ಮಾಡಿದರು. ಅಭಿಷೇಕ್ ಮಣೇಗಾರ್, ಬಾಲಕೃಷ್ಣ, ಚನ್ನೇಗೌಡ, ಎಂ.ಶಿವಪ್ರಸಾದ್, ಬಸವರಾಜು, ಕೃಷ್ಣ, ಪ್ರಭುಸ್ವಾಮಿ, ಸತೀಶ್, ಸಿದ್ದರಾಜು ಇದ್ದರು.
Published on
ತಿ.ನರಸೀಪುರ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಮೇ 13ರಂದು ಆಯೋಜಿಸಲಾಗಿದೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಅಭಿಷೇಕ್ ಮಣೇಗಾರ್ ಹೇಳಿದರು.
ಪುರಸಭೆ ವ್ಯಾಪ್ತಿಯ ಹಳೇ ತಿರುಮಕೂಡಲಿನ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಜಾತ್ಯತೀತ ಜನತಾ ದಳದ ಭರವಸೆಯ ಯುವ ನಾಯಕರಾಗಿದ್ದು ವಿಭಿನ್ನ ಆಲೋಚನೆಯೊಂದಿಗೆ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈವರೆಗೆ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆದಿದೆ. ವರುಣ ಕ್ಷೇತ್ರ ವ್ಯಾಪ್ತಿಯ ಮೆಲ್ಲಹಳ್ಳಿ ಗ್ರಾಮ ಸಮೀಪದ ಶಾಂತಲಾ ದೇವಿ ಕಲ್ಯಾಣ ಮಂಟಪದ ಬಳಿ ಇರುವ ವಿಶಾಲ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಕ್ಷದ ಮುಂಚೂಣಿ ನಾಯಕರು, ಪ್ರಮುಖ ಮುಖಂಡರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವರುಣ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಕೆಂಪಯ್ಯನಹುಂಡಿ ಬಾಲಕೃಷ್ಣ ಮಾತನಾಡಿ, ಪಕ್ಷದ ತತ್ವ ಹಾಗೂ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವುದು, ಯುವಕರನ್ನು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪಕ್ಷದ ಮೇಲೆ ಅವರಿಗಿರುವ ವರ್ಚಸ್ಸು, ಭರವಸೆ ಗಮನಿಸಿದರೆ ತಮಿಳುನಾಡಿನಲ್ಲಿ ಚಿತ್ರನಟ ವಿಜಯ್ ಯಾವ ರೀತಿ ಪಕ್ಷವನ್ನು ಅಧಿಕಾರಕ್ಕೆ ತಂದರೋ ಅದೇ ಮಾದರಿ ಬದಲಾವಣೆ ತಂದು ರಾಜ್ಯದಲ್ಲಿ 2028ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದರು.
ಪಕ್ಷ ಸಂಘಟನೆ, ಯುವಕರನ್ನು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮದ ರೂಪುರೇಷೆ, ವೇದಿಕೆ ವ್ಯವಸ್ಥೆ, ಪ್ರಚಾರ ಕಾರ್ಯ, ಸ್ವಾಗತ ಸಮಿತಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಯಿತು.
ಮುಖಂಡರಾದ ಚನ್ನೇಗೌಡ, ಎಂ.ಶಿವಪ್ರಸಾದ್, ಬಸವರಾಜು, ಆಟೋ ಕೃಷ್ಣ, ಹಿಟ್ಟುವಳ್ಳಿ ಪ್ರಭುಸ್ವಾಮಿ, ಯಡದೊರೆ ಸತೀಶ್, ನಾಡನಹಳ್ಳಿ ಸಿದ್ದರಾಜು, ಮಾದೇಗೌಡನ ಹುಂಡಿ ಚೇತು, ಅರುಣ, ಲಲಿತಾದ್ರಿಪುರ ಹರ್ಷ, ಹುನುಗನಹಳ್ಳಿ ಕೃಷ್ಣ, ಚಂದ್ರ, ರಂಗನಾಥಪುರ ಬಸವರಾಜು, ಕಾರ್ಯಕರ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net