ಸ್ವಾತಂತ್ರ್ಯ ಬಂದು 8 ದಶಕಗಳೇ ಕಳೆಯುತ್ತಿದ್ದರೂ ಸಂವಿಧಾನದ ನಿಜ ಆಶಯ ಈಡೇರಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನ ವಿರೋಧಿ ನಡೆಯನ್ನೇ ಅನುಸರಿಸುತ್ತಿವೆ. ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತೊಲಗಿಸಲು 70 ದಶಕದಲ್ಲಿ ದಲಿತ ಚಳವಳಿಗಳು ಪ್ರಖರತೆಯಿಂದ ಹೋರಾಟ ನಡೆಸಿದವು. ಆದರೆ 10-15 ವರ್ಷಗಳಲ್ಲಿ ಒಗ್ಗಟ್ಟಿನ ಕೊರತೆಯಿಂದ ದಲಿತ ಸಂಘಟನೆಗಳು ಒಡೆದು ಚೂರಾದವು. ಎಲ್ಲರ ಅಭಿವೃದ್ಧಿಗೆ ರಾಜಕೀಯ ಅಧಿಕಾರ ಅವಶ್ಯಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸಬೇಕಾದರೆ, ನಮ್ಮ ವೈಯಕ್ತಿಕ ತೆವಲುಗಳನ್ನು ಬದಿಗೊತ್ತಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಮ್ಮ ಹೋರಾಟವನ್ನು ಒಗ್ಗಟ್ಟಿನಿಂದ ಮುಂದುವರಿಸಬೇಕಿದೆ. ಇದಕ್ಕಾಗಿ ನಾವು ಸ್ವವಿಮರ್ಶೆಗೆ ಒಳಪಟ್ಟು ರಾಜಕೀಯ ಅಧಿಕಾರಕ್ಕಾಗಿ ಮುಂದಾಗಬೇಕೆಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.