ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಜೆ.ಮಂಜುನಾಥ್, ವಾಸೇಗೌಡೆ, ಎಸ್.ಜಯರಾಂ, ಬೆಂಕಿಪುರ ಚಿಕ್ಕಣ್ಣ, ರಾಜೇಶ್ವರಿ ಇತರರಿದ್ದರು.
Published on:
Copied
Follow Us
ಹುಣಸೂರು: ಶಿವಶರಣೆ ಹೇಮರಡ್ಡಿ ಮಲ್ಲಮ್ಮ 500 ವರ್ಷಗಳ ಹಿಂದೆಯೇ ಮಹಿಳಾ ಸಮಾನತೆ, ಮಾನವೀಯತೆಯ ಮಹತ್ವವನ್ನು ಸಾರಿದ ಹಾಗೂ ವೈಯಕ್ತಿಕ ಬದುಕಿನಲ್ಲೂ ಅನುಸರಿಸಿದ ಮಹಾಸಾಧ್ವಿ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಬಣ್ಣಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಘಟಕದ ವತಿಯಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮ ಭಕ್ತಿ, ತ್ಯಾಗ ಮತ್ತು ನಿಷ್ಠೆಗೆ ಪ್ರತಿರೂಪವಾಗಿದ್ದರು. ಸಮಾಜದಲ್ಲಿ ಕಡುಬಡತನದಲ್ಲಿದ್ದವರಿಗೆ ದಾನ-ಧರ್ಮಗಳ ಮೂಲಕ ಜೀವನ ನೀಡಿದರು. ಜೀವನದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿದ್ದ ತಮ್ಮ ಮೈದುನ ವೇಮನನನ್ನು ಸರಿದಾರಿಗೆ ತಂದು ಆಂಧ್ರಪ್ರದೇಶದ ಸರ್ವಜ್ಞನೆಂದೇ ಖ್ಯಾತಿ ಹೊಂದಿ ವೇಮನ ಮಹಾಯೋಗಿ ಎಂದು ಪರಿವರ್ತಿಸಿದ ಮಹಾನ್ ಸಂತೆ ಆಕೆ. ಅವಿಭಕ್ತ ಕುಟುಂಬವನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಮಹಿಳಾ ಸಮಾನತೆಯ ಕುರಿತು ಅಂದಿನ ಕಾಲದಲ್ಲೇ ಸಮಾಜಕ್ಕೆ ಸಂದೇಶಗಳನ್ನು ನೀಡಿ ಅದರಂತೆ ತಮ್ಮ ಜೀವನದಲ್ಲೂ ಪಾಲಿಸುವ ಮೂಲಕ ಶಿವಭಕ್ತೆ ಹೇಮರಡ್ಡಿ ಮಲ್ಲಮ್ಮ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಶಿರಸ್ತೇದಾರ್ ಶ್ರೀಪಾದ್ ನಲವತ್ತವಾಡೇಕರ್, ಮುಖಂಡರಾದ ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ವಾಸೇಗೌಡ, ಹೊನ್ನಪ್ಪ, ಡಿ.ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಎಸ್.ಜಯರಾಂ ಮತ್ತಿತರರು ಹಾಜರಿದ್ದರು.