ಕಪ್ಪುಚಕ್ಕೆ ಇಲ್ಲದಂತೆ ಆಡಳಿತ ನಡೆಸಿದ ಬಾಬೂಜಿ

ಹುಣಸೂರಿನಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 40ನೇ ಪುಣ್ಯಸ್ಮರಣೆಯಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ, ತಹಸೀಲ್ದಾರ್ ಜೆ.ಮಂಜುನಾಥ್, ಡಿವೈಎಸ್‌ಪಿ ರವಿ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಇದ್ದರು.
ಹುಣಸೂರಿನಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 40ನೇ ಪುಣ್ಯಸ್ಮರಣೆಯಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ, ತಹಸೀಲ್ದಾರ್ ಜೆ.ಮಂಜುನಾಥ್, ಡಿವೈಎಸ್‌ಪಿ ರವಿ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಇದ್ದರು.
Published on
ಹುಣಸೂರು: ತಮ್ಮ ಸುದೀರ್ಘ ಆಡಳಿತಾವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಆಡಳಿತದೊಂದಿಗೆ ಕ್ರಾಂತಿಕಾರಕ ಯೋಜನೆಗಳನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಬಾಬು ಜಗಜೀವನರಾಮ್ ಆಗಿದ್ದಾರೆ ಎಂದು ಆದಿಜಾಂಬವ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ಕುಮಾರ್ ಅಭಿಪ್ರಾಯಪಟ್ಟರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬಾಬೂಜಿ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಉಪಪ್ರಧಾನಿ, ಕಾರ್ಮಿಕ, ರಕ್ಷಣಾ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ 40 ವರ್ಷಗಳ ಕಾಲ ಆಡಳಿತ ನಡೆಸಿ ಜನೋಪಯೋಗಿ ಯೋಜನೆಗಳನ್ನು ನೀಡಿದರು. ಕೃಷಿಸಚಿವರಾಗಿ ಹಸಿರು ಕ್ರಾಂತಿಯನ್ನೇ ಮಾಡುವ ಮೂಲಕ ಬಡಜನರ ಹೊಟ್ಟೆಗೆ ಅನ್ನ ನೀಡಿದರು. ಪ್ರಧಾನಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಪ್ರಧಾನಿಪಟ್ಟಕ್ಕೆ ಏರುವಲ್ಲಿ ಒಳಸಂಚಿನಿಂದ ಮೋಸಹೋದರು. ಮೀರಾಬಾಯಿ ಅಪ್ಪಟ ಭಕ್ತರಾಗಿದ್ದ ಬಾಬೂಜಿ ತಮ್ಮ ಪುತ್ರಿಗೂ ಮೀರಾ ಎಂದೇ ನಾಮಕರಣ ಮಾಡಿದ್ದರು ಎಂದರು.
ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಮಾತನಾಡಿ, ಸಂವಿಧಾನ ರಚನೆಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕಾರ್ಮಿಕರು, ಶೋಷಿತರು, ರೈತರಿಗೆ ದೊಡ್ಡ ಕೊಡುಗೆ ನೀಡಿರುವ ಡಾ.ಬಾಬು ಜಗಜೀವನರಾಮ್ ಅವರಂತಹ ಅನೇಕ ನಾಯಕರು ಈ ದೇಶಕ್ಕೆ ಸಮಾನತೆ, ಭ್ರಾತೃತ್ವದ ದೊಡ್ಡ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಸ್ಮರಣೆ ಅತ್ಯಗತ್ಯವೆಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮುಖಂಡ ನಿಂಗರಾಜ ಮಲ್ಲಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜಯರಾಂ ಮಾತನಾಡಿದರು. ತಹಸೀಲ್ದಾರ್ ಜೆ.ಮಂಜುನಾಥ್, ಡಿವೈಎಸ್‌ಪಿ ರವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಅಶೋಕ್, ಗ್ಯಾರಂಟಿ ಸಮಿತಿ ಸದಸ್ಯ ರಾಘು, ಸತೀಶ್‌ಪಾಪಣ್ಣ, ಶಿವಮ್ಮ, ಸಣ್ಣಮಾದಯ್ಯ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಬಿಇಒ ಕಾಳನಾಯಕ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಇತರ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net