ನಗರದ ಪಡುವಾರಹಳ್ಳಿ ನಿವಾಸಿ ಸಂಜಯ್(25) ಬಂಧಿತ. ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಘಟಕದ ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಅವರ ಮಾಹಿತಿಯ ಮೇರೆಗೆ ಮಂಗಳವಾರ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಾತೃ ಮಂಡಳಿ ಸರ್ಕಲ್ ಬಳಿಯ ನಂ.2733 ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಬಂಧಿತ ಸಂಜಯ್ ತಂಬಾಕು ಇತ್ಯಾದಿ ಪರಿಕರಗಳನ್ನು ಬಳಸಿ ಕಾನೂನಿನ ಉಲ್ಲಂಘನೆ ಮಾಡುತ್ತಿರುವುದಲ್ಲದೆ ಸಾರ್ವಜನಿಕರ ವಿಶೇಷವಾಗಿ ಯುವಕ/ಯುವತಿಯರ ಜೀವಕ್ಕೆ ಅಪಾಯ ಮತ್ತು ಜೀವಕ್ಕೆ ಹಾನಿ ಉಂಟು ಮಾಡುವ ಕೆಫೆ ಬೈಟ್ ಎಂಬ ಹೆಸರಿನ ಕೆಫೆ ನಡೆಸುತ್ತಿದ್ದ. ಸದರಿ ಕೆಫೆಯ ಮೇಲೆ ದಾಳಿ ಮಾಡಿ, ಸುಮಾರು 50 ಸಾವಿರ ರೂ.ಬೆಲೆ ಬಾಳುವ ಹುಕ್ಕಾ ಪಾಟ್‌ಗಳು, ಸಿದ್ಧಪಡಿಸಲು ಬಳಸುತ್ತಿದ್ದ 27 ಕಚ್ಚಾ ವಸ್ತುಗಳು ಹಾಗೂ ಡಿವಿಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಸೇವನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ವಿ.ವಿ.ಪುರಂ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು, ಈ ಸಂಬಂಧ ವಿ.ವಿ. ಪುರಂ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಕೋಟ್ಪಾ ಪ್ರಕರಣ ದಾಖಲಾಗಿದೆ.