2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 44,094 ಅಂಗವಿಕಲರು ಇದ್ದಾರೆ. ಈ ಪೈಕಿ ದೈಹಿಕ ವಿಕಲಾಂಗರು 22,732, ದೃಷ್ಟಿ ದೋಷವುಳ್ಳವರು 7,964, ಶ್ರವಣ ದೋಷವುಳ್ಳವರು 784, ಬುದ್ಧಿಮಾಂದ್ಯರು 3,558, ಮಾನಸಿಕ ಅಸ್ವಸ್ಥರು 981, ಕುಷ್ಠರೋಗ ನಿವಾರಿತರು 846 ಹಾಗೂ ಬಹುವಿಧ 929 ಜನ ಅಂಗವಿಕಲರಿದ್ದಾರೆ. ಇವರಲ್ಲಿ ಬಹುತೇಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಬಾಡಿಗೆ ಕಟ್ಟಲು ಆಗದಂತಹ ಆರ್ಥಿಕ ಸಂಕಷ್ಟ ಇದೆ. ಹೀಗಾಗಿ ಜಿಲ್ಲಾಡಳಿತ ಅಂಗವಿಕಲರಿಗಾಗಿ ನಗರದಲ್ಲಿ ಪ್ರತ್ಯೇಕ ಬಡಾವಣೆ ಮಾಡಲು ಮುಂದಾಗಿದೆ.