ಮೈಸೂರು: ನಗರದ ಬೋಗಾದಿಯಲ್ಲಿನ ಕರುನಾಡು ಟೈರ್ಸ್ ನೆರವು ನಿಧಿ ಸಮಿತಿ ವತಿಯಿಂದ ಜ.4ರಂದು ಬೆಳಗ್ಗೆ 11ಕ್ಕೆ ಗದ್ದಿಗೆ ಮುಖ್ಯ ರಸ್ತೆಯ ಗಣಪತಿ ದೇವಸ್ಥಾನ ಹಿಂಭಾಗದ ಬಯಲು ರಂಗ ಮಂದಿರದಲ್ಲಿ ಐಡಿ ಕಾರ್ಡ್ ವಿತರಣೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಚನ್ನನಾಯಕ ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಡಾ.ಎಚ್.ಸಿ.ಮಹದೇವಪ್ಪ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಐಡಿ ಕಾರ್ಡ್ ವಿತರಿಸುವರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೋಮಲಾ, ಪ್ರಕಾಶ್, ಕುಮಾರ್ ಕಿರುಗಾವಲು, ಗೋವಿಂದನಾಯಕ, ಪರಮೇಶ್ ಹಾಗೂ ಪಲ್ಲವಿ ಇದ್ದರು.