ಆಷಾಢದ ಎರಡನೇ ಶುಕ್ರವಾರದ ಅಂಗವಾಗಿ ತಮಿಳುನಾಡಿನ ಕೊಯಮತ್ತೂರಿನ ಉದ್ಯಮಿ ತಿರುಮಲೈಸ್ವಾಮಿ ತಂಬು ಅವರಿಂದ ಸತತ 15ನೇ ವರ್ಷ ಅನ್ನದಾಸೋಹ ಏರ್ಪಡಿಸಿದ್ದರು. ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಬೆಳಗ್ಗೆ ಇಡ್ಲಿ, ಪೊಂಗಲ್, ಉಪ್ಪಿಟ್ಟು, ಕೇಸರಿಬಾತ್ ಹಾಗೂ ಉದ್ದಿನವಡೆ ಪ್ರಸಾದವಾಗಿ ವಿತರಿಸಲಾಗಿದ್ದು, ಮಧ್ಯಾಹ್ನದಿಂದ ರಾತ್ರಿ 8ರವರೆಗೆೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಕೃತಜ್ಞತೆ ಸಲ್ಲಿಸಿದರು.