ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

  ಹುಣಸೂರು ನಗರಸಭೆ ಖರೀದಿಸಿದ್ದ ಆಟೋ ಟಿಪ್ಪರ್ ಮತ್ತು ಮಿನಿ ಹಿಟಾಚಿಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಹಸಿರು ನಿಶಾನೆ ತೋರುವ ಮೂಲಕ ಸಾರ್ವಜನಿಕ ಸೇವೆಗೆ ನೀಡಿದರು. ಪೌರಾಯುಕ್ತೆ ಕೆ.ಮಾನಸ, ಪರಿಸರ ಇಂಜಿನಿಯರ್ ಸೌಮ್ಯ, ಬಸವಲಿಂಗಯ್ಯ, ಸತೀಶ್ ಪಾಪಣ್ಣ, ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • cleanliness
ಹುಣಸೂರು: ನಗರಸಭೆಯಿಂದ ಖರೀದಿಸಲಾದ ಮೂರು ಆಟೋ ಟಿಪ್ಪರ್‌ಗಳು ಮತ್ತು ಒಂದು ಮಿನಿ ಇಟಾಚಿಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರಸಭೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಾಹನಗಳ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆಯ ನಿಧಿಯಡಿ 28.50 ಲಕ್ಷ ರೂ.ಗಳ ವೆಚ್ಚದಡಿ ಮೂರು ಆಟೋ ಟಿಪ್ಪರ್‌ಗಳು ಮತ್ತು 15ನೇ ಹಣಕಾಸು ನಿಧಿಯಡಿ 26.50 ಲಕ್ಷ ರೂ.ಗಳ ವೆಚ್ಚದಡಿ ಮಿನಿ ಹಿಟಾಚಿ ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭಗೊಳ್ಳಲಿದ್ದು, ನಗರದಾದ್ಯಂತ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಕಸ ಹಾಕುವ ಸ್ಥಳಗಳನ್ನು ಶುಚಿಗೊಳಿಸಿ ರಂಗೋಲಿ ಬಿಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಈ ಸಂಬಂಧ ಅಧಿಕಾರಿಗಳು ಅಭಿಯಾನ ನಡೆಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಕೆ.ಮಾನಸ, ಪರಿಸರ ಇಂಜಿನಿಯರ್ ಸೌಮ್ಯ, ಮುಖಂಡರಾದ ಸತೀಶ್ ಪಾಪಣ್ಣ, ಬಸವಲಿಂಗಯ್ಯ, ಎಚ್.ಪಿ.ಸತೀಶ್‌ಕುಮಾರ್, ರಾಣಿ ಪೆರುಮಾಳ್, ಲಿಂಗರಾಜು, ಆದಿ ಜಾಂಬವ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಮತ್ತು ಪೌರಕಾರ್ಮಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net