ಕ್ಲಬ್‌ನಲ್ಲಿ ಖಾಲಿ ಇದ್ದ 5 ಸದಸ್ಯ ಸ್ಥಾನಗಳಿಗೆ ಕ್ಲಬ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಒಟ್ಟು 201 ಮತಪತ್ರಗಳು ದಾಖಲಾಗಿತ್ತು.
ಎಣಿಕೆ ಕಾಲಕ್ಕೆ 2 ಮತಪತ್ರಗಳು ಅನೂರ್ಜಿತಗೊಂಡಿದ್ದು, 199 ಮತಪತ್ರಗಳು ಸಿಂಧುವಾಗಿದ್ದವು. ಆ ಮೂಲಕ ಒಟ್ಟು ಮತಗಳನ್ನು 995 ಮತಗಳು ಎಂದು ಪರಿಗಣನೆಗೆ ದಾಖಲಾಯಿತು. (ರಾಷ್ಟ್ರಪತಿ ಚುನಾವಣೆ ಮತಲೆಕ್ಕ ಮಾದರಿ) ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಮತದಾನ ಮಾಡಿದ ಸದಸ್ಯರೆಲ್ಲರಿಗೂ ಮೈಸೂರು ರೇಸ್ ಕ್ಲಬ್ ಆಭಾರಿಯಾಗಿದೆ ಎಂದು ಎಂಆರ್‌ಸಿ ಕಾರ್ಯದರ್ಶಿ ಮತ್ತು ಸಿಇಒ ಎನ್‌ಎಚ್‌ಎಸ್ ಮಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.