ಮೀನುಗಾರರು ಸುರಕ್ಷತೆಗೆ ಆದ್ಯತೆ ನೀಡಲಿ

ಕೆ.ಆರ್.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಫಲಾನುಭವಿಗಳಿಗೆ ಮೀನು ಹಿಡಿಯುವ ಪರಿಕರಗಳ ಕಿಟ್ಟನ್ನು ಶಾಸಕ ಡಿ.ರವಿಶಂಕರ್ ವಿತರಿಸಿದರು. ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ವಿ.ಪಿ.ಕುಲದೀಪ್, ಎಸ್.ರವಿ, ಬೋರನಾಯಕ,ಶಿವರಂಜನ್ ಇದ್ದರು.
ಕೆ.ಆರ್.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಫಲಾನುಭವಿಗಳಿಗೆ ಮೀನು ಹಿಡಿಯುವ ಪರಿಕರಗಳ ಕಿಟ್ಟನ್ನು ಶಾಸಕ ಡಿ.ರವಿಶಂಕರ್ ವಿತರಿಸಿದರು. ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ವಿ.ಪಿ.ಕುಲದೀಪ್, ಎಸ್.ರವಿ, ಬೋರನಾಯಕ,ಶಿವರಂಜನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಿ.ರವಿಶಂಕರ್ ಸಲಹೆ
ಕೆ.ಆರ್.ನಗರ : ಮೀನುಗಾರರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎಸ್‌ಟಿಪಿ ಮತ್ತು ಎಸ್‌ಇಪಿ ಯೋಜನೆ ಹಾಗೂ ಸಾಮಾನ್ಯ ಅನುದಾನದಿಂದ ಮೀನುಗಾರರಿಗೆ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಿನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಫಲಾನುಭವಿಗಳಿಗೆ ಇತ್ತೀಚೆಗೆ ಮೀನುಗಾರಿಕೆ ಪರಿಕರಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಮೀನುಗಾರರಿಗೆ ದೋಣಿ, ಹರಿಗೋಲು, ಬಲೆ ಸೇರಿದಂತೆ ಇತರ ಸವಲತ್ತುಗಳನ್ನು ಉಚಿತವಾಗಿ 30 ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶ ಇದಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಹೊಂದಬೇಕು. ಮೀನುಗಾರರು ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ಗಾಳಿ ಮತ್ತು ಮಳೆ ಬೀಳುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದೆಂದು ಕಿವಿಮಾತು ಹೇಳಿದರು.
ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ತಾಪಂ ಇಒಗಳಾದ ವಿ.ಪಿ.ಕುಲದೀಪ್, ಎಸ್.ರವಿ, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಬೋರನಾಯಕ, ಇಲಾಖೆಯ ಸಹಾಯ ನಿರ್ದೇಶಕ ಶಿವರಂಜನ್, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೆ.ಆನಂದ ರೈತ ರಾಜ್ಯ ಮುಖಂಡ ಎಂ.ಜೆ.ರಮೇಶ್ ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net