ಮೈಸೂರು ಜಿಲ್ಲೆಯಲ್ಲಿ ಮೊದಲ ಅಕ್ಕ ಕೆಫೆ ಕಾರ್ಯಾರಂಭ

 ಜಿಲ್ಲಾ ಪಂಚಾಯಿತಿ ಕಚೇರಿ ಹಿಂಭಾಗ ಕಾರ್ಯಾರಂಭ ಮಾಡಿರುವ ‘ಅಕ್ಕ ಕೆಫೆ’ಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಸಿಹಿ ಸ್ವೀಕರಿಸಿದರು. ಎಸ್.ಯುಕೇಶ್ ಕುಮಾರ್, ಶೇಕ್ ತನ್ವೀರ್ ಆಸೀಫ್ ಇತರರಿದ್ದರು.
ಜಿಲ್ಲಾ ಪಂಚಾಯಿತಿ ಕಚೇರಿ ಹಿಂಭಾಗ ಕಾರ್ಯಾರಂಭ ಮಾಡಿರುವ ‘ಅಕ್ಕ ಕೆಫೆ’ಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಸಿಹಿ ಸ್ವೀಕರಿಸಿದರು. ಎಸ್.ಯುಕೇಶ್ ಕುಮಾರ್, ಶೇಕ್ ತನ್ವೀರ್ ಆಸೀಫ್ ಇತರರಿದ್ದರು.
Published on
ಮೈಸೂರು: ಜಿಲ್ಲಾ ಪಂಚಾಯಿತಿ ಕಚೇರಿ ಹಿಂಭಾಗ ತೆರೆದಿರುವ ‘ಅಕ್ಕ ಕೆಫೆ’ಗೆ ಸೋಮವಾರ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೆಫೆ ಉದ್ಘಾಟಿಸಿದರು. ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎನ್.ವಿಷ್ಣುವರ್ಧನ್ ಸೇರಿದಂತೆ ಅನೇಕರು ಇದ್ದರು.
ರಾಜ್ಯದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಜತೆಗೂಡಿ ಇದನ್ನು ಕಾರ್ಯಗತಗೊಳಿಸಿದೆ. ಮಹಿಳಾ ಸ್ವಸಹಾಯ ಸಂಘಕ್ಕೆ ಇದರ ಉಸ್ತುವಾರಿ ವಹಿಸಿದ್ದು, ಇದುವೇ ಕೆಫೆ ನಿರ್ವಹಣೆ ಮಾಡಿಕೊಂಡು ಹೋಗಲಿದೆ. ಇದು ಜಿಲ್ಲೆಯ ಮೊದಲ ಅಕ್ಕ ಕೆಫೆ ಆಗಿದ್ದು, ಇಂತಹ ಮೂರು ಕೆಫೆಗಳು ತಲೆಯೆತ್ತಲಿವೆ. ತಹಸೀಲ್ದಾರ್ ಕಚೇರಿ ಸಮೀಪ ಹಾಗೂ ಹುಣಸೂರಿನಲ್ಲಿ ಅಕ್ಕ ಕೆಫೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸರ್ಕಾರದ ಅನುದಾನದಲ್ಲೇ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಲಾಗಿದೆ. ಪ್ರೀಮಿಯಂ ರೆಸ್ಟೋರೆಂಟ್ ಆಗಿರುವ ಇದಕ್ಕೆ ಸರ್ಕಾರ 15 ಲಕ್ಷ ರೂ. ನೀಡಿದೆ. ಕೆಫೆಯ ನವೀಕರಣ, ನೆಲಹಾಸು, ಗೋಡೆಗಳು ಮತ್ತು ಛಾವಣಿ, ಶೇಖರಣಾ ಕ್ಯಾಬಿನೆಟ್‌ಗಳು, ಕೊಳಾಯಿ ವ್ಯವಸ್ಥೆ, ಸಿಸಿ ಕ್ಯಾಮರಾ, ರಸೀದಿ ಯಂತ್ರ ಖರೀದಿ, ಪೀಠೋಪಕರಣಗಳು ಖರೀದಿಗೆ ಸರ್ಕಾರವೇ ಅನುದಾನ ನೀಡಿದೆ. ಕೆಫೆಗೆ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಸಿಲಿಂಡರ್, ಸ್ಟವ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್‌ಗಳನ್ನು ಸ್ವಸಹಾಯ ಸಂಘದ ಸದಸ್ಯರು ಖರೀದಿಸಿದ್ದಾರೆ.
ಬೆಳಗ್ಗೆಯಿಂದ ರಾತ್ರಿವರೆಗೆ ಕಾರ್ಯ ನಿರ್ವಹಣೆ ಮಾಡುವ ಅಕ್ಕ ಕೆಫೆಯು ಗ್ರಾಹಕರಿಗೆ ಗುಣಮಟ್ಟದ ತಿಂಡಿ, ಊಟವನ್ನು ಕಡಿಮೆ ದರದಲ್ಲಿ ಕಲ್ಪಿಸಿಕೊಡಲಿದೆ. ಕೆಫೆಯನ್ನು ಸಂಪೂರ್ಣ ಮಹಿಳಾ ಸದಸ್ಯರೇ ನಿರ್ವಹಣೆ ಮಾಡುತ್ತಿದ್ದಾರೆ. ಬೆಳಗ್ಗೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್, ಪೊಂಗಲ್, ಮಧ್ಯಾಹ್ನ ಮಿನಿಮಿಲ್ಸ್, ಚಪಾತಿ, ಮುದ್ದೆ ಊಟ ದೊರೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net