ತಾಲೂಕಿನ ಮಡುವಿನಹಳ್ಳಿ, ಈರೇಗೌಡನ ಹುಂಡಿ, ಹೊಸವೀಡು, ಒಡೆಯನಪುರ, ದೇಪೇಗೌಡನಪುರ, ಬಳ್ಳೂರ ಹುಂಡಿ, ಮಹದೇವನಗರ, ನಾಗನಾಪುರ, ದೇವರಾಯಶೆಟ್ಟಿಪುರ, ಕೊತ್ತನಹಳ್ಳಿ, ಕುರುಬರಹುಂಡಿ, ಶ್ರೀಕಂಠಪುರ, ಅಂಜನಾಪುರ ಸೇರಿದಂತೆ ಕಾಡಂಚಿನ ಹತ್ತಾರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿಮೀರಿದೆ. ಎಲ್ಲ ಗ್ರಾಮಗಳು ಓಂಕಾರ್, ನಂಜನಗೂಡು ಹಾಗೂ ಯಡಿಯಾಲ ಅರಣ್ಯ ಪ್ರದೇಶಗಳ ವ್ಯಾಪ್ತಿಗೆ ಒಳಪಟ್ಟಿವೆ.