ಮೈಸೂರು ವಿವಿಯಲ್ಲಿ ಪರಿಸರ ದಿನಾಚರಣೆ

 ಮೈಸೂರು ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಕಾಯಕಯೋಗಿ ಮೇಸ್ತ್ರಿ ಮಾದಯ್ಯ ಅವರಿಗೆ ಪರಿಸರ ಪ್ರಜ್ಞಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎನ್.ಕೆ. ಲೋಕನಾಥ್, ಮೇಸ್ತ್ರಿ ಮಾದಯ್ಯ, ಬಿ.ಎಸ್. ಕೃಪಾಕರ, ಪ್ರೊ.ಚಂದ್ರಮೌಳಿ, ಪ್ರೊ.ಎಂ. ನಂಜಯ್ಯ ಹೊಂಗನೂರು, ಅಹಿಂದ ಜವರಪ್ಪ, ಎಂ.ಎಸ್.ಚಂದ್ರ ಇದ್ದರು.
ಮೈಸೂರು ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಕಾಯಕಯೋಗಿ ಮೇಸ್ತ್ರಿ ಮಾದಯ್ಯ ಅವರಿಗೆ ಪರಿಸರ ಪ್ರಜ್ಞಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎನ್.ಕೆ. ಲೋಕನಾಥ್, ಮೇಸ್ತ್ರಿ ಮಾದಯ್ಯ, ಬಿ.ಎಸ್. ಕೃಪಾಕರ, ಪ್ರೊ.ಚಂದ್ರಮೌಳಿ, ಪ್ರೊ.ಎಂ. ನಂಜಯ್ಯ ಹೊಂಗನೂರು, ಅಹಿಂದ ಜವರಪ್ಪ, ಎಂ.ಎಸ್.ಚಂದ್ರ ಇದ್ದರು.
Published on
ಮೈಸೂರು: ಮೈಸೂರು ವಿಶ್ವವಿದ್ಯಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬೋಧಿ ವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್ ವತಿಯಿಂದ ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ವಿಶ್ವ ಪರಿಸರ ದಿನವನ್ನು ಸಾಮಾನ್ಯವಾಗಿ ಜೂ.5 ರಂದು ಆಚರಿಸುತ್ತೇವೆ. ಆದರೆ, ಅದು ಸಾಂಕೇತಿಕ ದಿನ ಮಾತ್ರ. ಪ್ರತಿನಿತ್ಯ ನಮ್ಮ ಪರಿಸರದ ಬಗ್ಗೆ ಚಿಂತನೆ ಮಾಡಿ ಪರಿಸರ ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ಈ ಹಿಂದೆ ಶುದ್ಧ ಗಾಳಿ, ನೀರು ದೊರೆಯುತ್ತಿದ್ದ ಜಾಗದಲ್ಲಿ ಜನರು ಮನೆ ನಿರ್ಮಾಣ ಮಾಡುತ್ತಿದ್ದರು. ಆದರೆ, ನಗರೀಕರಣದಿಂದ ಶುದ್ಧ ಗಾಳಿ, ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಮಳೆಯ ಕೊರತೆಯೂ ಎದುರಾಗಿದೆ. ಇಂಹತ ವಾತಾವ ರಣ ನಿರ್ಮಾಣವಾಗಲು ನಗರೀಕರಣವೇ ಪ್ರಮುಖ ಕಾರಣ ಎಂದು ಹೇಳಿದರು.
ವಿದ್ಯಾರ್ಥಿಗಳು ಗಿಡ ನೆಟ್ಟು ಅದನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಜತೆಗೆ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡಲು ಪ್ರಯತ್ನ ಮಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಬಾರದು. ನಾವು ನಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದಿಲ್ಲ. ಆದರೆ, ಮನೆಯ ಹೊರಗೆ ಮಾತ್ರ ಏತಕ್ಕೆ ಕಸವನ್ನು ಎಸೆಯುತ್ತೇವೆ? ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಪ್ರತಿಯೊಬ್ಬರು ನೆಲ, ಜಲ, ಪರಿಸರವನ್ನು ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಪರಿಸರ ಕಾಯಕಯೋಗಿ ಮೇಸ್ತ್ರಿ ಮಾದಯ್ಯ ಅವರಿಗೆ ಪರಿಸರ ಪ್ರಜ್ಞಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ವನ್ಯಜೀವಿ ಛಾಯಾಗ್ರಾಹಕ ಬಿ.ಎಸ್. ಕೃಪಾಕರ, ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರೊ. ಚಂದ್ರಮೌಳಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಬೋಧಿ ವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್ ಅಧ್ಯಕ್ಷ ಎಂ.ಎಸ್. ಚಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net