ನೇಣು ಬಿಗಿದು ಇಂಜಿನಿಯರ್ ಆತ್ಮಹತ್ಯೆ

ಆತ್ಮಹತ್ಯೆ
ಆತ್ಮಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಆರಂಭದಲ್ಲಿ ಸಂತೋಷವಾಗಿದ್ದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ
  • 30 ಲಕ್ಷ ರೂ. ಹಣ ನೀಡಿದಲ್ಲಿ ಮಗಳನ್ನು ತೋರಿಸುತ್ತೇನೆಂದು ಹೆಂಡತಿ ತಾಕಿತ್ತು
ಮೈಸೂರು: ಪುತ್ರಿಯನ್ನು ನೋಡಲು ಅವಕಾಶ ನೀಡದ ಹೆಂಡತಿಯ ವರ್ತನೆಯಿಂದ ಬೇಸತ್ತ ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ತಿ.ನರಸೀಪುರದ ಜಾಲಹಳ್ಳಿ ನಿವಾಸಿ, ಇಂಜಿನಿಯರ್ ಉಮೇಶ್(34)ಮೃತರು. ರಾಜೀವನಗರದ ರಿಂಗ್ ರಸ್ತೆ ಬಳಿಯ ಖಾಸಗಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. 
ಸಿದ್ಧಾರ್ಥನಗರದ ಚನ್ನಬಸವೇಗೌಡ ಅವರ ಪುತ್ರಿ ರಮ್ಯಾ ಅವರನ್ನು ಉಮೇಶ್ ಅವರು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗು ಸಹ ಇದೆ. ಆರಂಭದಲ್ಲಿ ಸಂತೋಷವಾಗಿದ್ದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳವಾಡುತ್ತಿದ್ದರು.
ಡಿ.19ರಂದು ಇವರು ಮಗಳನ್ನು ತೋರಿಸುವಂತೆ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆದರೆ, 30 ಲಕ್ಷ ರೂ. ಹಣ ನೀಡಿದಲ್ಲಿ ಮಗಳನ್ನು ತೋರಿಸುತ್ತೇನೆಂದು ಹೆಂಡತಿ ತಿಳಿಸಿದ್ದಾರೆ. 
ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆಲನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net